ಇಂದು ಮಧ್ಯರಾತ್ರಿ ಬೆಂಗಳೂರಿಗೆ ಪ್ರಜ್ವಲ್ ರೇವಣ್ಣ: ಟರ್ಮಿನಲ್ ಪಾಸ್ ಗಾಗಿ ಭದ್ರತಾ ಪಡೆಗೆ ಪತ್ರ ಬರೆದ SIT

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಇಂದು(ಮೇ.30) ಮಧ್ಯರಾತ್ರಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಸ್​ಐಟಿ(SIT)ತಂಡ ಬಂದಿದ್ದಾರೆ.

ವಿಮಾನ ಇಳಿದು ಇಮಿಗ್ರೇಷನ್​ಗೆ ಆಗಮಿಸುವ ಪ್ರಜ್ವಲ್ ರೇವಣ್ಣ, ಇಮಿಗ್ರೇಷನ್ ವೇಳೆಯೇ ಏರ್ಪೋರ್ಟ್ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೋಲೀಸರಿಗೆ ಒಪ್ಪಿಸಲಿದ್ದು, ಬಳಿಕ ಏರ್ಪೋರ್ಟ್ ಪೋಲೀಸರ ಮೂಲಕ ಎಸ್​ಐಟಿ ವಶಕ್ಕೆ ಪಡೆಯಲಿದೆ.

ಇನ್ನು ಮಧ್ಯರಾತ್ರಿ 12.30 ಕ್ಕೆ ಪ್ರಜ್ವಲ್​ ರೇವಣ್ಣ ಅವರು ಆಗಮಿಸಲಿದ್ದು, ಈ ವೇಳೆ ರ್​ಪೋರ್ಟ್ ​ ರೀತಿ-ರಿವಾಜು ಮುಗಿಯುವುದಕ್ಕೆ ಕನಿಷ್ಠ 20 ರಿಂದ 30 ನಿಮಿಷ ಕಾಲಾವಕಾಶ ಇರಲಿದೆ. ನಂತರ ವಿಮಾನ ನಿಲ್ದಾಣದಿಂದ ಪ್ರಜ್ವಲ್ ಹೊರ ಬರಲಿದ್ದಾರೆ. ಈ ಹಿನ್ನಲೆ ಏರ್​ಪೋರ್ಟ್ ಟರ್ಮಿನಲ್ ಒಳಗೆ ತೆರಳಲು 8ರಿಂದ 10 ಅಧಿಕಾರಿಗಳಿಗೆ ಪಾಸ್ ನೀಡುವಂತೆ ಪತ್ರ ಏರ್​ಪೋರ್ಟ್ ಭದ್ರತಾ ಪಡೆಗೆ ಎಸ್ಐಟಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!