Monday, October 3, 2022

Latest Posts

ಪ್ರತಿಕೂಲ ವಾತಾವರಣ ಹಿನ್ನೆಲೆ: ಉಮೇಶ್‌ ಕತ್ತಿ ಪಾರ್ಥಿವ ಶರೀರ ಏರ್‌ಲಿಫ್ಟ್‌ ವಿಳಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿನ್ನೆ ತಡರಾತ್ರಿ ಎಂ.ಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಸಚಿವ ಉಮೇಶ್‌ ಕತ್ತಿ ಅವರ ಪಾರ್ಥಿವ ಶರೀರವನ್ನ ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ವಿಶೇಷ ವಿಮಾನದಲ್ಲಿ ಹೆಚ್‌ಎಎಲ್ ನಿಂದ ಬೆಳಗಾವಿಗೆ ಏರ್‌ಲಿಫ್ಟ್‌ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಬರುವುದರಲ್ಲಿ ತಡವಾಗಿದೆ.

ಚನ್ನೈನಿಂದ ಬರಬೇಕಿದ್ದ ವಿಮಾನ ಪ್ರತಿಕೂಲ ವಾತಾವರಣದಿಂದ ಕ್ಯಾನ್ಸಲ್‌ ಆಗಿದೆ. ಹಾಗಾಗಿ ಇದೀಗ ಹೈದರಾಬಾದ್‌ನಿಂದ ವಿಶೇಷ ವಿಮಾನ ಬರಲಿದೆ. 10.30ರ ಕತ್ತಿ ಅವರ ಪಾರ್ಥೊವ ಶರೀರವನ್ನು ವೇಳೆಗೆ ಏರ್‌ಲಿಫ್ಟ್‌ ಮಾಡುವ ಸಾಧ್ಯತೆಯಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!