AERO INDIA | ಫೆ.10 ರಿಂದ ಬೆಂಗಳೂರಿನಲ್ಲಿ `ಏರೋ ಇಂಡಿಯಾ 2025′, ಏಷ್ಯಾದ ಅತಿದೊಡ್ಡ ಏರ್‌ ಶೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ, 15ನೇ ಆವೃತ್ತಿಯ ಏರೋ ಇಂಡಿಯಾ-2025ಕ್ಕೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 10 ರಿಂದ 14ರ ವರೆಗೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿದೆ.

Visitor registration for Aero India 2025 in Bengaluru goes live - The Hindu‘ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್’- ಬಿಲಿಯನ್ ಅವಕಾಶಗಳಿಗೆ ರನ್ ವೇ ಎಂಬ ವಿಶಾಲ ಧೇಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮ ವಿದೇಶಿ ಮತ್ತು ಭಾರತೀಯ ಸಂಸ್ಥೆಗಳ ನಡುವಿನ ಪಾಲುದಾರಿಕೆಯನ್ನು ರೂಪಿಸಲು ಮತ್ತು ಜಾಗತಿಕ ಮೌಲ್ಯ ಸರಣಿಯಲ್ಲಿ ದೇಶೀಕರಣ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಲು ಹೊಸ ಮಾರ್ಗಗಳ ಅನ್ವೇಷಣೆಗೆ ವೇದಿಕೆಯನ್ನು ಒದಗಿಸುತ್ತದೆ.

More than 240 exhibitors register for Aero India 2025 - The Hinduಕಾರ್ಯಕ್ರಮದ ಮೊದಲ ಮೂರು ದಿನಗಳು ವ್ಯವಹಾರದ ದಿನಗಳಾಗಿರುತ್ತವೆ. ಆದರೆ 13 ಮತ್ತು 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮ ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ ಮತ್ತು ಸ್ಥಿರ ಪ್ರದರ್ಶನಗಳನ್ನು ಒಳಗೊಂಡಿದೆ.

Events & Festivals in India | A Ministry of Tourism Initiativeಇದರಲ್ಲಿ ಪೂರ್ವಭಾವಿ ಕಾರ್ಯಕ್ರಮ, ಉದ್ಘಾಟನಾ ಕಾರ್ಯಕ್ರಮ, ರಕ್ಷಣಾ ಸಚಿವರ ಸಮಾವೇಶ, ಸಿಇಒಗಳ ದುಂಡು ಮೇಜಿನ ಸಭೆ, ಮಂಥನ್ ಸ್ಟಾರ್ಟ್-ಅಪ್ ಕಾರ್ಯಕ್ರಮ, ಉಸಿರು ಬಿಗಿಹಿಡಿದು ನೋಡುವ ಮೈನವಿರೇಳಿಸುವ ಏರ್ ಶೋಗಳಿವೆ, ಜತೆಗೆ ಇಂಡಿಯಾ ಪೆವಿಲಿಯನ್ ಅನ್ನು ಒಳಗೊಂಡಿರುವ ದೊಡ್ಡ ಪ್ರದರ್ಶನ ಪ್ರದೇಶ ಮತ್ತು ಏರೋಸ್ಪೇಸ್ ಕಂಪನಿಗಳ ವ್ಯಾಪಾರ ಮೇಳವನ್ನು ಒಳಗೊಂಡಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!