ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹು ನಿರೀಕ್ಷಿತ ದ್ವೈವಾರ್ಷಿಕ ಏರೋ ಇಂಡಿಯಾ ಶೋಗೆ ಇನ್ನು ಕೇವಲ ಎರಡು ತಿಂಗಳು ಬಾಕಿ ಉಳಿದಿದ್ದು, ಫೆಬ್ರವರಿ 10ರಿಂದ 14ರವರೆಗೆ ದೇಶದ ಪ್ರಧಾನ ವೈಮಾನಿಕ ಪ್ರದರ್ಶನ ನಡೆಯಲಿರುವ ಯಲಹಂಕದ ವಾಯುಪಡೆ ನಿಲ್ದಾಣವು ರಾಜ್ಯ ಸರ್ಕಾರದ ಅದರಲ್ಲೂ ಮುಖ್ಯವಾಗಿ ಅರಣ್ಯ ಇಲಾಖೆಯ ಕಣ್ಗಾವಲಿನಲ್ಲಿದೆ.
ಬೆಂಗಳೂರು ಉತ್ತರ ತಾಲೂಕಿನ ಘಂಟಿಗಾನಹಳ್ಳಿ ಅರಣ್ಯ ಬ್ಲಾಕ್‌ನಲ್ಲಿರುವ ಸರ್ವೆ ನಂಬರ್ 49ರಲ್ಲಿ ಏರೋ ಇಂಡಿಯಾ ಇರುವ ಜಾಗ 159.28 ಎಕರೆ ಮೀಸಲು ಅರಣ್ಯವಾಗಿದ್ದು ಏರೋ ಇಂಡಿಯಾ ಶೋ ಬೇರೆ ಕಡೆ ಮಾಡುವಂತೆ ಹೇಳುತ್ತಿದೆ.