Saturday, March 25, 2023

Latest Posts

ಏರೋ ಇಂಡಿಯಾ ಶೋ: ತುರ್ತು ಆರೋಗ್ಯ ಸೇವೆಗಾಗಿ 30 ವೈದ್ಯಕೀಯ ತಂಡಗಳ ನಿಯೋಜನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫೆಬ್ರವರಿ 13 ರಿಂದ 17ರ ವರೆಗೆ ಏರೋ ಇಂಡಿಯಾ-2023 (Aero India 2023) ವೈಮಾನಿಕ ಪ್ರದರ್ಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತುರ್ತು ಆರೋಗ್ಯ ಸೇವೆ ಕಲ್ಪಿಸಲು ಆರೋಗ್ಯ ಇಲಾಖೆ (Health Department) 30 ವೈದ್ಯಕೀಯ ತಂಡಗಳನ್ನ (Medical Team) ನಿಯೋಜನೆ ಮಾಡಿದೆ.

ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಈ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

30 ತುರ್ತು ಆರೋಗ್ಯ ವಿಪತ್ತು ನಿರ್ವಹಣಾ ತಂಡಗಳನ್ನ ನಿಯೋಜನೆ ಮಾಡಲಾಗಿದೆ. ಪ್ರತಿ ತಂಡದಲ್ಲಿ ಒಬ್ಬ ತಜ್ಞ ವೈದ್ಯರು (Doctors), ಶುಶ್ರೂಷಕಿ, ಫಾರ್ಮಾಸಿಸ್ಟ್ ಮತ್ತು ಸಹಾಯಕ ಸಿಬ್ಬಂದಿ ಅಂಬುಲೆನ್ಸ್ (Ambulance) ವಾಹನದೊಂದಿಗೆ ಇರುತ್ತಾರೆ.
ಒಳಾಂಗಣದಲ್ಲಿ 10 ತಂಡಗಳು ಹಾಗೂ ಹೊರಾಂಗಣದಲ್ಲಿ 20 ತಂಡಗಳ ನಿಯೋಜನೆ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿಯ 45 ಅಂಬುಲೆನ್ಸ್ (Ambulance) ವಾಹನಗಳ ಬಳಕೆ ಮಾಡಲಾಗುತ್ತಿದೆ. 70 ವೈದ್ಯರು, 80 ಅರೆ ವೈದ್ಯಕೀಯ ಸಿಬ್ಬಂದಿ ಮತ್ತು 27 ಸಹಾಯಕ ಸಿಬ್ಬಂದಿಯೂ ಈ ತಂಡದಲ್ಲಿ ಇರಲಿದ್ದಾರೆ.

ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗಳು (Private Hospital) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಕೈ ಜೋಡಿಸಿವೆ. ಖಾಸಗಿ ಆಸ್ಪತ್ರೆಗಳಲ್ಲಿ 1,928 ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 750 ಹಾಸಿಗೆಗಳನ್ನ ಕಾಯ್ದಿರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!