ಆಫ್ಘನ್ ಭೂಕಂಪ: ಮೃತರಲ್ಲಿ ಶೇ.90ರಷ್ಟು ಮಕ್ಕಳು, ಮಹಿಳೆಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದಲ್ಲಿ ಕಳೆದ ಶನಿವಾರ ಸಂಭವಿಸಿದ ಭೂಕಂಪದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಮೃತರಲ್ಲಿ ಶೇ,90ರಷ್ಟು ಮಹಿಳೆಯರು, ಮಕ್ಕಳಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಆಫ್ಘನ್‌ನ ಝೆಂಡಾ ಜಾನ್ ಜಿಲ್ಲೆ ಭೂಕಂಪನದ ಕೇಂದ್ರವಾಗಿದ್ದು, ಇಲ್ಲಿಯ ಎಲ್ಲ ಮನೆಗಳು ನಾಶವಾಗಿವೆ. ಬೆಳಗ್ಗೆ ಭೂಕಂಪ ಸಂಭವಿಸಿದ ಕಾರಣ ಮಹಿಳೆಯರು, ಮಕ್ಕಳು ಮನೆಯಲ್ಲೇ ಇದ್ದರು. ಮೊದಲ ಭೂಕಂಪನದ ಸದ್ದಿಗೆ ಯಾವುದೇ ಸ್ಫೋಟ ಎಂದು ಭಯಪಟ್ಟ ಜನರು ಮನೆಯಿಂದ ಹೊರ ಬಂದಿದ್ದಾರೆ.

ಝೆಂಡಾ ಜಿಲ್ಲೆಯಲ್ಲಿ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಇದರಲ್ಲಿಯೂ ಮಹಿಳೆಯರೇ ಹೆಚ್ಚು. ಬೆಳಗ್ಗೆ ಮನೆಗಳಲ್ಲಿ ಗಂಡಸರು ಇರುವುದು ಕಡಿಮೆ, ಗಂಡಸರು ಕೆಲಸಕ್ಕೆ ಹೋದರೆ ಮಕ್ಕಳು, ತಾಯಂದಿರು ಮನೆಯಲ್ಲೇ ಇರುತ್ತಿದ್ದರು. ಹೀಗಾಗಿ ಹೆಚ್ಚಿನ ಪಕ್ಷದಲ್ಲಿ ಮಹಿಳೆಯರು, ಮಕ್ಕಳೇ ಮೃತಪಟ್ಟಿದ್ದಾರೆ.

ಈಗಾಗಲೇ ವಿಶ್ವಸಂಸ್ಥೆ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ಸೌರ ದೀಪ, ನೈರ್ಮಲ್ಯ ಕಿಟ್ ಹಾಗೂ ಅಗತ್ಯ ಸಾಮಾಗ್ರಿಗಳನ್ನು ಒದಗಿಸಿದೆ, ಜತೆಗೆ 81ಟನ್‌ನಷ್ಟು ಆಹಾರವನ್ನು ಕಳುಹಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!