ಭಾರತದಲ್ಲಿನ ತನ್ನ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಶಾಶ್ವತವಾಗಿ ಮುಚ್ಚಿದ ಆಫ್ಘನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಲ್ಲಿನ 22ವರ್ಷಗಳ ತನ್ನ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಆಫ್ಘಾನಿಸ್ತಾನ ಶಾಶ್ವತವಾಗಿ ಮುಚ್ಚಿದೆ. ಭಾರತ ಸರ್ಕಾರದ ನಿರಂತರ ಸವಾಲುಗಳಿಂದಾಗಿ ನವೆಂಬರ್ 23ರಿಂದ ನವದೆಹಲಿಯಲ್ಲಿನ ತನ್ನ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಶಾಶ್ವತವಾಗಿ ಮುಚ್ಚಿರುವುದಾಗಿ ಅಫ್ಘಾನಿಸ್ತಾನದ ರಾಯಭಾರ ಕಚೇರಿ ಶುಕ್ರವಾರ ಘೋಷಿಸಿತು.

“ನಾವು ಈ ಹಿಂದೆ ಸೆಪ್ಟೆಂಬರ್ 30 ರಂದು ರಾಯಭಾರ ಕಚೇರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದೇವೆ, ನವದೆಹಲಿಯಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ ರಾಯಭಾರ ಕಚೇರಿಯ ಮುಂದುವರಿಕೆಗೆ ಭಾರತದ ಆಡಳಿತದ ವೈಖರಿ ಅನುಕೂಲಕರವಾಗಿ ಬೆಳೆಯುತ್ತದೆ ಎಂದು ಭಾವಿಸಿದ್ದೆವು. ಆದರೆ ದುರದೃಷ್ಟವಶಾತ್ ಎಂಟು ವಾರಗಳು ಕಳೆದರೂ, ರಾಜತಾಂತ್ರಿಕರಿಗೆ ವೀಸಾ ವಿಸ್ತರಣೆಯನ್ನು ಮಾಡಲಾಗಿಲ್ಲ”ಎಂದು ರಾಯಭಾರಿ ಫರೀದ್ ಮಮುಂಡ್ಝೈ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿಯಲ್ಲಿ ಗಂಭೀರ ಬದಲಾವಣೆಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ವಾಸಿಸುವ ಆಫ್ಘನ್ನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!