Saturday, October 1, 2022

Latest Posts

ಪಾಕ್ ಗೆ ಸುಲಭ ಟಾರ್ಗೆಟ್ ನೀಡಿದ ಆಫ್ಘಾನಿಸ್ತಾನ: ಭಾರತದ ಫೈನಲ್ ಕನಸು ನನಸಾಗುತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಹೋರಾಟದಲ್ಲಿ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ನಡುವಿನ ಭಾರತದ ಪಾಲಿಗೆ ಆಟ ಅತ್ಯಂತ ಪ್ರಮುಖವಾಗಿದೆ.

ಆಫ್ಘಾನಿಸ್ತಾನ 6 ವಿಕೆಟ್ ನಷ್ಟಕ್ಕೆ 129 ರನ್ ಸಿಡಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಸುಲಭ ಟಾರ್ಗೆಟ್ ನೀಡಿದೆ.

ಈಗಾಗಲೇ ಪಾಕಿಸ್ತಾನ ಆಫ್ಘಾನಿಸ್ತಾನ ಮಣಿಸಿ ಏಷ್ಯಾಕಪ್ ಫೈನಲ್ ಪ್ರವೇಶ ಖಚಿತಪಡಿಸಿಕೊಳ್ಳಲು ತುದಿಗಾಲ್ಲಿ ನಿಂತಿದೆ. ಇತ್ತ ಆಫ್ಘಾನಿಸ್ತಾನ ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ಮಣಿಸಿ ಜೀವಂತವಾಗಿರಲು ಯತ್ನಿಸುತ್ತಿದೆ. ಈ ರೋಚಕ ಹೋರಾಟ ಭಾರತಕ್ಕೆ ಆತಂಕ ಹೆಚ್ಚಿಸಿದೆ.

ಆಫ್ಘಾನಿಸ್ತಾನದ ಆರಂಭಿಕರ ಜೊತೆಯಾಟ 36 ರನ್‌ಗಳಿಗೆ ಅಂತ್ಯವಾಯಿತು. ರೆಹಮಾನುಲ್ಲಾ ಗುರ್ಬಾಜ್ 17 ರನ್ ಸಿಡಿಸಿ ಔಟಾದರು. ಹಜ್ರತುಲ್ಲಾ ಝೈಜೈ 21 ರನ್ ಕಾಣಿಕೆ ನೀಡಿದರು. ಇತ್ತ ಇಬ್ಹಾಹಿಂ ಜರ್ದಾನ್ ಹೋರಾಟ ನೀಡಿದರು. ಆದರೆ ಕರೀಮ್ ಜನತ್ 15 ರನ್ ಸಿಡಿಸಿ ಔಟಾದರು.ನಜೀಬುಲ್ಲಾ ಜರ್ದಾನ್ 10 ರನ್ ಸಿಡಿಸಿ ಔಟಾದರು. ನಾಯಕ ಮೊಹಮ್ಮದ್ ನಬಿ ಖಾತೆ ತೆರೆಯುವ ಮುನ್ನವೇ ಔಟಾದರು ಇಬ್ರಾಹಿಂ ಜರ್ದಾನ್ 35 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಅಜ್ಮತುಲ್ಹಾ ಒಮರ್ಜೈ ಹಾಗೂ ರಶೀದ್ ಖಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಲು ಪ್ರಯತ್ನಿಸಿದರು. ಅಜ್ಮತುಲ್ಹಾ ಒಮರ್ಜೈ ಅಜೇಯ 10 ರನ್ ಹಾಗೂ ರಶೀದ್ ಖಾನ್ ಅಜೇಯ18 ರನ್ ಸಿಡಿಸಿದರು. ಈ ಮೂಲಕ ಆಫ್ಘಾನಿಸ್ತಾನ 6 ವಿಕೆಟ್ ನಷ್ಟಕ್ಕೆ 129 ರನ್ ಸಿಡಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!