ತಾಲಿಬಾನ್‌ ಕ್ರೂರತ್ವ: ಬಹಿರಂಗವಾಗಿ ನಾಲ್ವರ ಕೈಗಳನ್ನು ಕತ್ತರಿಸಿ ಅಟ್ಟಹಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಾಲಿಬಾನಿಗಳ ಕ್ರೌರ್ಯ ಮತ್ತಷ್ಟು ಮಿತಿಮೀರಿದೆ. ಅಫ್ಘಾನಿಸ್ತಾನ ಆಕ್ರಮಿಸಿ ಆಡಳಿತವನ್ನು ಹಿಡಿದರೂ ಅವರ ಪೈಶಾಚಿಕತೆ ನಿಂತಿಲ್ಲ. ಮಹಿಳಾ ಶಿಕ್ಷಣಕ್ಕೆ ಅಡ್ಡಿಯಾಗಿ, ದೇಶವು ಬರಗಾಲದಿಂದ ಬಳಲುತ್ತಿರುವಾಗ ಅದನ್ನು ಬದಲಾಯಿಸುವ ಪ್ರಯತ್ನಗಳನ್ನು ಬದಿಗಿಟ್ಟು ಪೈಶಾಚಿಕತೆಯನ್ನು ಹೆಚ್ಚು ಹೆಚ್ಚು ಪೋಷಿಸಲಾಗುತ್ತಿದೆ. ಇದೀಗ ಸಾವಿರಾರು ಜನ ನೋಡುತ್ತಿರುವಾಗಲೇ ಸಾರ್ವಜನಿಕವಾಗಿ ಅತ್ಯಂತ ಅಮಾನುಷವಾಗಿ ನಾಲ್ವರ ಕೈಗಳನ್ನು ಕತ್ತರಿಸಿದ್ದಾರೆ.

ಹೊಟ್ಟೆ ಹಸಿದರೆ ಎಷ್ಟೇ ಒಳ್ಳೆಯವನಾದರೂ ಕಳ್ಳನಾಗುತ್ತಾನೆ ಎಂಬ ಮಾತಿದೆ. ಅಂತಹ ಹಸಿವು…ಕಳ್ಳತನ ಮಾಡಿದ ನಾಲ್ವರ ಕೈಗಳನ್ನು ಕತ್ತರಿಸೋಕೆ ಕಾರಣವಾಗಿದೆ. ಕಳ್ಳತನ ಮಾಡಿದರೆ ನ್ಯಾಯಯುತವಾಗಿ ಶಿಕ್ಷೆ ವಿಧಿಸಬೇಕು. ಆದರೆ ಅದು ತಾಲಿಬಾನಿಗಳ ಸಾಮ್ರಾಜ್ಯ..ಅವರು ಹೇಳಿದ್ದೇ ಕಾನೂನು. ಅದಕ್ಕಾಗಿಯೇ ಅವರು ಕಾನೂನನ್ನು ಕೈಗೆತ್ತಿಕೊಂಡು ಕಂದಹಾರ್‌ನ ಅಹ್ಮದ್ ಶಾಹಿ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸಾರ್ವಜನಿಕವಾಗಿ ನಾಲ್ವರ ಕೈಗಳನ್ನು ಕತ್ತರಿಸಲಾಯಿತು.

ಅಷ್ಟೇ ಅಲ್ಲ, ಇತರ ಒಂಬತ್ತು ಜನರನ್ನು ಚಾಟಿಯಿಂದ ಥಳಿಸಿದರು. ಈ ವಿಷಯವನ್ನು ಸ್ವತಃ ರಾಜ್ಯಪಾಲರ ಕಚೇರಿಯ ವಕ್ತಾರ ಹಾಜಿ ಝೈದ್ ಹೇಳಿದ್ದಾರೆ. ಆರೋಪಿಗಳಿಗೆ 35ರಿಂದ 39 ಬಾರಿ ಥಳಿಸಲಾಗಿದೆ. 9 ಮಂದಿಯನ್ನು ಶಿಕ್ಷೆ ವಿಧಿಸಲು ಕ್ರೀಡಾಂಗಣದಲ್ಲಿ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಫ್ಘಾನಿಸ್ತಾನದ ಪತ್ರಕರ್ತ ತಾಜುದೀನ್ ಸೊರೌಶ್, ಕ್ರೀಡಾಂಗಣದ ಹೊರಗಿನ ದೃಶ್ಯಗಳ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇತಿಹಾಸವು ಪುನರಾವರ್ತನೆಯಾಗಿದೆ ಮತ್ತು 1990 ರ ದಶಕದ ಸಾರ್ವಜನಿಕ ಶಿಕ್ಷೆಯ ಮರಣದಂಡನೆ ಮತ್ತೆ ಪ್ರಾರಂಭವಾಗಿದೆ ಎಂದು ವಿಷಾದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!