Sunday, December 10, 2023

Latest Posts

ಜಡೇಜಾ ಸ್ಪಿನ್ ಮೋಡಿಗೆ ಎಡವಿದ ಆಫ್ರಿಕಾ: ಟೀಮ್ ಇಂಡಿಯಾಕ್ಕೆ 243 ರನ್ ಗೆಲುವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆಲುವಿನ ಓಟ ಮುಂದುವರಿದಿದ್ದು, ಸೌತ್ ಆಫ್ರಿಕಾ ವಿರುದ್ಧವೂ ಮಾರಕ ಬೌಲಿಂಗ್ ದಾಳಿ ಮೂಲಕ ಟೀಂ ಇಂಡಿಯಾ 243 ರನ್ ಗೆಲುವು ದಾಖಲಿಸಿದೆ. ಆಫ್ರಿಕಾ 83 ರನ್‌ಗೆ ಆಲೌಟ್ ಆಗಿದೆ.

ಭಾರತ ನೀಡಿದ 327 ರನ್ ಟಾರ್ಗೆಟ್ ಬೆನ್ನತ್ತಿದ್ದ ಸೌತ್ ಆಫ್ರಿಕಾ ಆರಂಭದಿಂದಲೇ ಎಡವಿದ್ದು, ಸಿರಾಜ್ ಎಸೆತದಲ್ಲಿ ಕ್ವಿಂಟನ್ ಡಿಕಾಕ್ ಬೋಲ್ಡ್ ಆಗಿ ಪೆವಿಲಿಯನ್ ಸೇರಿದರು.

ನಾಯಕ ತೆಂಬಾ ಬವುಮಾ 11 ರನ್ ಸಿಡಿಸಿ ನಿರ್ಗಮಿಸಿದರು. 9 ರನ್ ಸಿಡಿಸಿದ್ದ ಆ್ಯಡಿನ್ ಮರ್ಕ್ರಮ್ ವಿಕೆಟ್ ಪತನಗೊಂಡಿತು.

ಬಳಿಕ ರವೀಂದ್ರ ಜಡೇಜಾ ಸ್ಪಿನ್ ಮೋಡಿ ಸೌತ್ ಆಫ್ರಿಕಾ ತಂಡಕ್ಕೆ ಇನ್ನಿಲ್ಲದ ಸಂಕಷ್ಟ ನೀಡಿತು. 13 ರನ್ ಸಿಡಿಸಿ ಆಸರೆಯಾಗಿದ್ದ ರಸಿ ವ್ಯಾಂಡರ್ ಡುಸೆನ್ ವಿಕೆಟ್ ಪತನ ಸೌತ್ ಆಫ್ರಿಕಾ ತಂಡಕ್ಕೆ ಮತ್ತಷ್ಟು ಆಘಾತ ನೀಡಿತು. ಡೇವಿಡ್ ಮಿಲ್ಲರ್ 11 ರನ್ ಸಿಡಿಸಿ ಔಟಾದರು. ಕೇಶವ್ ಮಹಾರಾಜ್ ಕೇವಲ 7 ರನ್ ಸಿಡಿಸಿ ನಿರಾಸೆ ಮೂಡಿಸಿದರು.

ಜಾನ್ಸೆನ್ 14 ರನ್ ಕಾಣಿಕೆ ನೀಡುವ ಮೂಲಕ ಸೌತ್ ಆಫ್ರಿಕಾ ಪರ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಗೆಗೆ ಪಾತ್ರರಾದರು. ಅಂತಿಮವಾಗಿ ಲುಂಗಿ ಎನ್‌ಗಿಡಿ ವಿಕೆಟ್ ಪತನದೊಂದಿಗೆ ಸೌತ್ ಆಫ್ರಿಕಾ 27.1 ಓವರ್‌ಗಳಲ್ಲಿ 80 ರನ್‌ಗೆ ಆಲೌಟ್ ಆಯಿತು. ಭಾರತ 243 ರನ್ ಗೆಲುವು ದಾಖಲಿಸಿತು.

ರವೀಂದ್ರ ಜಡೇಜಾ 5 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್ ತಲಾ 2, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದು ಮಿಂಚಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!