ಮತ್ತೆ ಆಫ್ರಿಕನ್ ಹಂದಿ ಜ್ವರದ ಅಟ್ಟಹಾಸ: ಕಣ್ಣೂರಿನಲ್ಲಿ 14 ಹಂದಿಗಳ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಮತ್ತೆ ಆಫ್ರಿಕನ್ ಹಂದಿ ಜ್ವರ ಅಟ್ಟಹಾಸ ಕೇಳಿಸಿದ್ದು, ಕಣ್ಣೂರು ಜಿಲ್ಲೆಯ ಕಣಿಚಾರ್ ಪಂಚಾಯತ್ ವ್ಯಾಪ್ತಿಯ ಕೊಲಕ್ಕಾಡ್ ಪ್ರದೇಶದ ಹಂದಿ ಫಾರಂನಲ್ಲಿ ಮತ್ತೆ ಈ ರೋಗ ಪತ್ತೆಯಾಗಿದೆ.

ರೋಗದಿಂದಾಗಿ ಜಮೀನಿನಲ್ಲಿದ್ದ 14 ಹಂದಿಗಳು ಸಾವನ್ನಪ್ಪಿದ್ದು, ಮಾಹಿತಿ ಸಿಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ಚರ್ಚಿಸಲಾಯಿತು.

ಕಳೆದ ವಾರ ಮೊದಲ ಬಾರಿಗೆ ವಯನಾಡು ಜಿಲ್ಲೆಯಲ್ಲಿ ಈ ರೋಗ ದೃಢಪಟ್ಟಿತ್ತು. ಮೊದಲು ಮಾನಂತವಾಡಿಯ ಜಮೀನಿನಲ್ಲಿ ಕಂಡುಬಂದ ಈ ರೋಗ ಹಲವು ಆತಂಕಗಳನ್ನು ಹುಟ್ಟುಹಾಕಿತ್ತು. ಆಫ್ರಿಕನ್ ಹಂದಿ ಜ್ವರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಂದಿ ಮಾಂಸದ ಆಮದನ್ನು ನಿಷೇಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!