Thursday, June 1, 2023

Latest Posts

15 ವರ್ಷಗಳ ಬಳಿಕ ಯಹೂದಿ ಜೋಡಿಯ ಮದುವೆಗೆ ಸಾಕ್ಷಿಯಾದ ದೇವರ ಸ್ವಂತ ನಾಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

15 ವರ್ಷದಲ್ಲಿ ಇದೇ ಮೊದಲ ಬಾರಿಗೆ ಜೇವಿಷ್ (ಯಹೂದಿ) ಸಮುದಾಯದ ವಿವಾಹವೊಂದು ಕೇರಳದಲ್ಲಿ ಅದ್ದೂರಿಯಾಗಿ ನಡೆಯಿತು.

ಕೊಚ್ಚಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಧುವರರ ಕುಟುಂಬದವರು, ಸ್ನೇಹಿತರು, ಬಂಧುಗಳು, ಸಮುದಾಯದ ಸದಸ್ಯರು ಭಾಗಿಯಾಗಿದ್ದರು. ಈ ವಿವಾಹಕ್ಕಾಗಿ ಇಸ್ರೇಲ್‌ನಿಂದ ಓರ್ವ ರಬ್ಬಿಯನ್ನು ಕರೆಸಲಾಗಿತ್ತು. (ರಬ್ಬಿ ಎಂದರೆ ಜೇವಿಶ್‌ ಸ್ಕಾಲರ್ ಆಗಿದ್ದು, ಆ ಧರ್ಮದ ಸಂಪ್ರದಾಯ ವಿಚಾರಗಳನ್ನು ಧಾರೆ ಎರೆಯುವವರು)

ಅಪರಾಧ ವಿಭಾಗದ ಮಾಜಿ ಎಸ್‌ಪಿ ಬಿನೋಯ್ ಮಲಖೈ ( Benoy Malakhai) ಅವರ ಪುತ್ರಿ ಅಮೆರಿಕಾದಲ್ಲಿ ಡಾಟಾ ಸೈಂಟಿಸ್ಟ್ ಆಗಿದ್ದ ವಧು ರಾಚೆಲ್ ಮಲಖೈ (Rachel Malakhai) ಅವರು ಅಮೆರಿಕಾದ ಪ್ರಜೆ ಹಾಗೂ ನಾಗರಿಕನಾಗಿರುವ ಹಾಗೂ ನಾಸಾದಲ್ಲಿ ಉದ್ಯೋಗಿಯಾಗಿರುವ ರಿಚರ್ಡ್ ಝಛರಿ ರೊವೆ (Richard Zachary Rowe) ಅವರೊಂದಿಗೆ ಸಪ್ತಪದಿ ತುಳಿದರು. ಇಸ್ರೇಲ್‌ನಿಂದ ಬಂದಿದ್ದ ರಬ್ಬಿ, ಏರಿಯಲ್ ಟೈಸನ್ (Ariel Tyson) ಈ ವಿವಾಹವನ್ನು ಜೇವಿಷ್ ಸಂಪ್ರದಾಯದಂತೆ ನಡೆಸಿಕೊಟ್ಟಿದ್ದಾರೆ.

ಕೇರಳದಲ್ಲಿ ಇಂತಹ ವಿವಾಹಗಳು ಅಪರೂಪವಾಗಿ ನಡೆಯುವುದರಿಂದ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ. ಕೇರಳದಲ್ಲಿ ಕೊನೆಯ ಯಹೂದಿ ವಿವಾಹವು 2008ರಲ್ಲಿ ನಡೆದಿತ್ತು. ಇದಾಗಿ ಬರೋಬ್ಬರಿ 15 ವರ್ಷಗಳ ನಂತರ ಯಹೂದಿ ವಿವಾಹವು ನಡೆದಿದೆ.

ಈ ವಿವಾಹ ಸಮಾರಂಭವೂ ಮನೆಯನ್ನು ಸಾಂಕೇತಿಸುವ ಹುಪ್ಪಾದ ( ಜೇವಿಷ್ ಸಮುದಾಯದಲ್ಲಿ ವಿವಾಹದ ವೇಳ ವಧು ವರರು ಈ ಹುಪ್ಪಾ ಎಂದು ಕರೆಯಲ್ಪಡುವ ಬಟ್ಟೆಯ ಚಪ್ಪರದ ಕೆಳಗೆ ನಿಲ್ಲುತ್ತಾರೆ) ಕೆಳಗೆ ನಡೆಯಿತು. ಇದು ಕೇರಳದಲ್ಲಿ ನಡೆದ ಮೊದಲ ಜೇವಿಷ್ ಸಮುದಾಯದ ವಿವಾಹವಾಗಿದೆ ಎಂದು ಜೇವಿಷ್ ಸಮುದಾಯದ ಮೂಲಗಳು ಹೇಳಿವೆ.

ಕೆಲವು ಇತಿಹಾಸಕಾರರ (historians) ಪ್ರಕಾರ, ಕೇರಳವನ್ನು ತಲುಪಿದ ಮೊದಲ ಯಹೂದಿಗಳು ವ್ಯಾಪಾರಿಗಳಾಗಿದ್ದರು ಮತ್ತು ಅವರು 2,000 ವರ್ಷಗಳ ಹಿಂದೆ ರಾಜ ಸೊಲೊಮೋನನ ಕಾಲದಲ್ಲಿ ಬಂದಿದ್ದರು. ಪ್ರಸ್ತುತ ರಾಜ್ಯದಲ್ಲಿ ಕೆಲವೇ ಕೆಲವು ಯಹೂದಿ ಕುಟುಂಬಗಳು ಉಳಿದಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!