ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಮುರುಡೇಶ್ವರ ಕಡಲತೀರದಲ್ಲಿ ನಿರ್ಬಂಧಗಳನ್ನು ತೆಗೆದುಹಾಕಲಾಗಿದ್ದು, ಕಳೆದ 21 ದಿನಗಳಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿತ್ತು.
ಕಡಲ ತೀರದಲ್ಲಿ ಕೋಲಾರ ಮೂಲದ ಶಾಲಾ ವಿದ್ಯಾರ್ಥಿನಿಯರ ಸಾವಾದ ನಂತರ ಜಿಲ್ಲಾಡಳಿತ ಕಡಲ ತೀರಕ್ಕೆ ನಿರ್ಬಂಧ ವಿಧಿಸಿತ್ತು. ಇದೀಗ ಕಡಲ ತೀರದಲ್ಲಿ ಪ್ರವಾಸಿಗರ ಸುರಕ್ಷತೆ ಕ್ರಮ ಕೈಗೊಳ್ಳಲಾಗಿದ್ದು, ಸಮುದ್ರಕ್ಕೆ ಇಳಿಯುವರಿಗೆ ಸ್ವಿಮಿಂಗ್ ಜೋನ್ ವ್ಯವಸ್ಥೆ ಮಾಡಲಾಗಿದೆ.
ಆರು ಜೀವರಕ್ಷಕರನ್ನು ಸಹ ನೇಮಿಸಲಾಗಿದ್ದು, ಅವರಿಗೆ ವಿಶೇಷ ಜೀವರಕ್ಷಕ ಸಾಧನಗಳನ್ನು ನೀಡಲಾಗಿದೆ. ಪ್ರತ್ಯೇಕವಾಗಿ, ಬೀಚ್‌ನಿಂದ 70 ಕ್ಕೂ ಹೆಚ್ಚು ಅನಧಿಕೃತ ಮಳಿಗೆಗಳನ್ನು ತೆಗೆದುಹಾಕಲಾಗಿದೆ ಮತ್ತು ಕಾರುಗಳು ಮತ್ತು ದೊಡ್ಡ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳನ್ನು ರಚಿಸಲಾಗಿದೆ.