ಹೊಸದಿಗಂತ ಡಿಜಿಟಲ್ ಡೆಸ್ಕ್:
ಮರಿಯ ಪೋಲ್ ನ ಅಜೊವ್ ಸ್ಟಾಲ್ ಉಕ್ಕಿನ ಕಾರ್ಖಾನೆಯಲ್ಲಿ ಸಿಲುಕಿರುವ ನಾಗರೀಕರ ಸ್ಥಳಾಂತರದ ನಂತರ ಮತ್ತೆ ರಷ್ಯಾವು ಶೆಲ್ ದಾಳಿ ಪ್ರಾರಂಭಿಸಿದೆ.
ಮರಿಯ ಪೋಲ್ ನಲ್ಲಿ ಸಿಲುಕಿರುವ ನಾಗರೀಕರ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡುವಂತೆ ವಿಶ್ವ ಸಂಸ್ಥೆಯ ಪ್ರಧಾನಿ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ರಷ್ಯಾದ ಬಳಿ ಮನವಿ ಮಾಡಿದ್ದರು. ಅದಕ್ಕೆ ಸಮ್ಮತಿಸಿದ ರಷ್ಯಾ ರಕ್ಷಣಾಕಾರ್ಯಾಚರಣೆಯ ವೇಳೆ ದಾಳಿ ಮಾಡುವುದಿಲ್ಲವೆಂದು ಭರವಸೆ ನೀಡಿತ್ತು.
ಅಲಲಿನ ನಾಗರೀಕರ ಸ್ಥಳಾಂತರ ಪ್ರಕ್ರಿಯೆಯು ಕೊನೆಗೊಳ್ಳುತ್ತಿದ್ದಂತೆ ಮತ್ತೆ ರಷ್ಯಾ ತನ್ನ ದಾಳಿ ಮುಂದುವರಿಸಿದಿದ್ದು ಇದುವರೆಗೂ ವಶಪಡಿಸಿಕೊಳ್ಳಲಾಗದ ಮರಿಯ ಪೋಲ್ ಉಕ್ಕಿನ ಕಾರ್ಖಾನೆಯ ಮೇಲೆ ಶೆಲ್ ದಾಳಿ ಪ್ರಾರಂಭಿಸಿದೆ ಎಂದು ಉಕ್ರೇನ್ ನ ಮಿಲಿಟರಿ ಮೂಲಗಳು ಹೇಳಿವೆ. ಇನ್ನೂ ಕೆಲವರು ಅಲ್ಲಿ ಸಿಲುಕಿಕೊಂಡಿದ್ದು ಅವರನ್ನು ಹೊರತರುವ ಮುನ್ನವೇ ರಷ್ಯಾ ಪುನಃ ದಾಳಿ ಪ್ರಾರಂಭಿಸಿದೆ ಎಂದು ಹೇಳಲಾಗಿದೆ.