ಸಾಮಾಗ್ರಿಗಳು
ಈರುಳ್ಳಿ
ಖಾರದಪುಡಿ
ಗರಂ ಮಸಾಲಾ
ಸಾಂಬಾರ್ ಪುಡಿ
ಮ್ಯಾಗಿ ಮಸಾಲಾ
ಕೊತ್ತಂಬರಿ ಸೊಪ್ಪು
ಪನೀರ್
ಬೇಯಿಸಿದ ಆಲೂಗಡ್ಡೆ
ಉಪ್ಪು
ಎಣ್ಣೆ
ಗೋಧಿಹಿಟ್ಟು
ಮಾಡುವ ವಿಧಾನ
ಮೊದಲು ಬಟ್ಟಲಿಗೆ ಗೋಧಿಹಿಟ್ಟು, ಉಪ್ಪು ಹಾಕಿ ಬೆಚ್ಚಗಿನ ನೀರಿನಲ್ಲಿ ಕಲಸಿಕೊಳ್ಳಿ, ಆನಂತರ ಅದನ್ನು ನೆನೆಯಲು ಇಡಿ
ನಂತರ ಬಾಣಲೆಗೆ ಎಣ್ಣೆ ಹಾಕಿ, ಅದು ಕಾದ ನಂತರ ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ
ಈರುಳ್ಳಿ ಪಾರದರ್ಶಕ ಆದ ನಂತರ ಅದಕ್ಕೆ ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಗೂ ಮ್ಯಾಗಿ ಮಸಾಲಾ ಹಾಕಿ
ಗೊಜ್ಜು ಸ್ವಲ್ಪ ಸ್ಟ್ರಾಂಗ್ ಇರುವಂತೆ ನೋಡಿಕೊಳ್ಳಿ. ಆನಂತರ ಇದಕ್ಕೆ ತುರಿದ ಪನೀರ್, ಮ್ಯಾಶ್‌ಮಾಡಿದ ಬೇಯಿಸಿದ ಆಲೂಗಡ್ಡೆ ಹಾಕಿ
ಕೊತ್ತಂಬರಿ ಸೊಪ್ಪು ಹಾಕಿ ಬಿಡಿ. ತಣ್ಣಗಾದ ನಂತರ ಎಲ್ಲವನ್ನೂ ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆಗಳನ್ನು ತಯಾರಿಸಿ
ಆನಂತರ ಚಪಾತಿ ಸಣ್ಣದಾಗಿ ಲಟ್ಟಿಸಿ, ಪಲ್ಯ ಒಳಗೆ ಇಟ್ಟು ಮತ್ತೆ ಲಟ್ಟಿಸಿ
ಕಾದ ಹೆಂಚಿನ ಮೇಲೆ ಹಾಕಿ ಬೇಯಿಸಿ, ತುಪ್ಪ ಅಥವಾ ಬೆಣ್ಣೆಯ ಜೊತೆ ಸವಿಯಿರಿ
ಇದರಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್, ಫ್ಯಾಟ್ ಎಲ್ಲವೂ ಇದೆ. ಮಕ್ಕಳ ಬಾಕ್ಸಿಗೆ, ನಿಮ್ಮ ಬಾಕ್ಸಿಗೂ ಇದು ಪರ್ಫೆಕ್ಟ್ ತಿಂಡಿಯಾಗಿದೆ.



