Wednesday, February 8, 2023

Latest Posts

ನಾಲ್ಕು ದಶಕಗಳ ಬಳಿಕ ಬ್ರಹ್ಮಕಲಶಕ್ಕೆ ಸಜ್ಜಾಗುತ್ತಿದೆ ‘ಬಡಗು ಶಬರಿಮಲೆ’ ಕ್ಷೇತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಡಗು ಶಬರಿಮಲೆ ಎಂದೇ ಕರೆಯಲ್ಪಡುವ ಕಾಸರಗೋಡು ಬದಿಯಡ್ಕ ಸಮೀಪದ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತರ ಕ್ಷೇತ್ರದಲ್ಲಿ ಇದೀಗ 40 ವರ್ಷಗಳ ಬಳಿಕ  ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಧೂಮಾವತಿ, ಪರಿವಾರ ದೈವಗಳ ಪ್ರತಿಷ್ಠೆಗೆ ಸಿದ್ಧತೆ ಅಂತಿಮ ಹಂತದಲ್ಲಿದೆ.

ಡಿಸೆಂಬರ್ 25ರಿಂದ ಆರಂಭಗೊಂಡು 2023 ಜನವರಿ 5ರ ತನಕ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಾನಾ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.  ಧರ್ಮಸ್ಥಳದ ಧರ್ಮಾಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ವಿವಿಧ ಮಠಾೀಪತಿಗಳು, ಧಾರ್ಮಿಕ ಮುಂದಾಳುಗಳು ಪ್ರತೀ ದಿನ ನಡೆಯುವ ಧಾರ್ಮಿಕ ಸಭೆಗಳು ಭಾಗವಹಿಸುವರು.

ಶ್ರೀ ಕ್ಷೇತ್ರದಲ್ಲಿ ಶ್ರೀ ಮಹಾದೇವ, ಶ್ರೀಪಾರ್ವತಿ, ಶ್ರೀ  ಶಾಸ್ತಾರ,  ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಪರಶುರಾಮ ಮೊದಲಾದ ದೈವಿಕ ಶಕ್ತಿಗಳನ್ನೊಳಗೊಂಡ ಪವಿತ್ರ ಕ್ಷೇತ್ರವಾಗಿದೆ. ಸಮೀಪದಲ್ಲಿ ಶ್ರೀ ಧೂಮಾವತಿ, ಪರಿವಾರ ದೈವಗಳ ಸ್ಥಾನವು  ಇದು ಸಹ ಜೀರ್ಣೋದ್ಧಾರಗೊಂಡು ದೈವಪ್ರತಿಷ್ಠೆ ನಡೆಯಲಿದೆ.

ಶ್ರೀ ಕ್ಷೇತ್ರಕ್ಕೆ ಹೊಂದಿಕೊಂಡು ಅನ್ನಛತ್ರವನ್ನು ಸಹ ನಿರ್ಮಿಸಲಾಗಿದೆ. ಇದರ ಕಾಮಗಾರಿಯು ತ್ವರಿತಗತಿಯಲ್ಲಿ ನಡೆಯಲಿದೆ.
ಡಾ. ಕಿಶೋರ್ ಕುಮಾರ್ ಕುಣಿಕುಳ್ಳಾಯ ಉಬ್ರಂಗಳ ಮೊಕ್ತೇಸರರರಾಗಿದ್ದು  ಬ್ರಹ್ಮಕಲಶೋತ್ಸದ ಯಶಸ್ವಿಗಾಗಿ ಮಧುಸೂದನ್ ಆಯರ್ ಮಂಗಳೂರು ಅಧ್ಯಕ್ಷರಾಗಿಯೂ, ಹರಿನಾರಾಯಣ ಮಾಸ್ತರ್ ಶಿರಂತಡ್ಕ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಶಾಂತ್ ಕುಣಿಕುಳ್ಳಾಯ ಕೋಶಾಕಾರಿಯಾಗಿರುವ ಬ್ರಹ್ಮಕಲಶೋತ್ಸವ ಸಮಿತಿಯು ವಿವಿಧ ಉಪಸಮಿತಿಗಳನ್ನು ರಚಿಸಿಕೊಂಡು ಈಗಾಗಲೇ ಕಾರ್ಯಪ್ರವೃತರಾಗಿದ್ದಾರೆ.

ಇದೀಗ ಶ್ರೀ ಕ್ಷೇತ್ರವು ಸುಮಾರು 3ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳ್ಳುತ್ತಿರುವುದು. ಗರ್ಭಗುಡಿಯ ನವೀಕರಣ, ತಾಮ್ರದ ಛಾವಣಿ, ತೀರ್ಥ ಮಂಟಪ ನವೀಕರಣ, ಹದಿನೆಂಟು ಮೆಟ್ಟಲು ನವೀಕರಣ, ಒಳಂಗಣ, ಹೊರ ಪ್ರಾಂಗಣ ನವೀಕರಣ, ಅನ್ನಛತ್ರ ನಿರ್ಮಾಣ, ಧೂಮಾವತಿ ದೈವಸ್ಥಾನ ಸೇರಿದಂತೆ ಹಲವು ಕೆಲಸಗಳು ಅಂತಿಮ ಹಂತದಲ್ಲಿದೆ.

ಪಾಟು ಉತ್ಸವ ವಿಶೇಷತೆ
ಕುಂಬ್ಡಾಜೆ ಪಂಚಾಯಿತಿಯ ಉಬ್ರಂಗಳ ಗ್ರಾಮದಲ್ಲಿರುವ ಈ ಕ್ಷೇತ್ರವು ಬಡಗು ಶಬರಿಮಲೆ ಎಂಬ ಖ್ಯಾತಿ ಹೊಂದಿದೆ. ಎತ್ತರದಲ್ಲಿರುವ ಕ್ಷೇತ್ರಕ್ಕೆ ಹದಿನೆಂಟು ಮೆಟ್ಟಲುಗಳಿರುವುದು ವಿಶೇಷತೆಯಾಗಿದೆ. ಈ ಕ್ಷೇತ್ರದ ಸಮೀಪದ ಕಾಟ್ನೂಜಿಯ ವನದಲ್ಲಿ ಉದ್ಭವರೂಪದಲ್ಲಿಯೂ, ಕ್ಷೇತ್ರದಲ್ಲಿ ಪ್ರತಿಷ್ಠಾರೂಪದಲ್ಲಿರುವ ಶ್ರೀ ಶಾಸ್ತಾರನಿಗೆ ವಿಶೇಷ ಪ್ರಾಧ್ಯಾನ್ಯತೆಯಿದೆ. ಪಾಟು ಉತ್ಸವ ನಡೆಸಲ್ಪಡುವ ಉತ್ತರ ಕೇರಳದ ಕೆಲವೇ ಕ್ಷೇತ್ರಗಳಲ್ಲಿ ಇದು ಒಂದಾಗಿದೆ. ಇದೀಗ ಜಾತ್ರೋತ್ಸವದಂಗವಾಗಿ ಜ.3ರಿಂದ ಪಾಟು ಉತ್ಸವ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!