ಬೈಕ್ ಗೆ ಡಿಕ್ಕಿ ಹೊಡೆದ ಬಳಿಕ ವ್ಯಕ್ತಿಯನ್ನು 3 ಕಿ.ಮೀ. ಎಳೆದೊಯ್ದ ಕಾರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಂಪತಿ ಮತ್ತು ಅವರ ಐದು ವರ್ಷದ ಮಗುವನ್ನು ಹೊತ್ತೊಯ್ಯುತ್ತಿದ್ದ ಬೈಕ್ ಗೆ ಇನ್ನೋವಾ ಡಿಕ್ಕಿ ಹೊಡೆದು, ಫೆಂಡರ್ ಮತ್ತು ಸ್ಟೀಲ್ ಚೌಕಟ್ಟಿನ ನಡುವೆ ಬೈಕ್ ಸವಾರನನ್ನು ಸಿಲುಕಿಸಿ ಸುಮಾರು ಮೂರು ಕಿಲೋಮೀಟರ್ ದೂರದವರೆಗೆ ಎಳೆದೊಯ್ದ ದಾರುಣ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು ಅವನ ಹೆಂಡತಿ ಮತ್ತು ಮಗು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ವೀರೇಂದ್ರ ಕುಮಾರ್ ಪತ್ನಿ ಹಾಗೂ ಮಗುವಿನೊಂದಿಗೆ ರಾಯ್ ಬರೇಲಿಯಿಂದ ದಲ್ಮಾವು ಪಟ್ಟಣಕ್ಕೆ ಬರುತ್ತಿದ್ದ ವೇಳೆ ವೇಗವಾಗಿ ಬಂದ ಇನ್ನೋವಾ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪತ್ನಿ ಮತ್ತು ಮಗು ಬೈಕ್‌ನಿಂದ ಎಸೆಯಲ್ಪಟ್ಟಿದ್ದು, ವೀರೇಂದ್ರ ಬಲಭಾಗದ ಫೆಂಡರ್ ಮತ್ತು ಚಕ್ರದ ನಡುವೆ ಸಿಲುಕಿಕೊಂಡರು. ಅಪಘಾತ ಸಂಭವಿಸಿದರೂ ಚಾಲಕ ಕಾರು ನಿಲ್ಲಿಸದೆ ವೀರೇಂದ್ರನನ್ನು ಮೂರು ಕಿಲೋಮೀಟರ್ ವರೆಗೆ ಎಳೆದೊಯ್ದ ಚಾಲಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವೀರೇಂದ್ರ ಅವರ ಪತ್ನಿ ರೂಪಲ್ ಹಾಗೂ ಮಗ ಅನುರಾಗ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!