ಪತಿ ರೇವಣ್ಣ ಬಂಧನ ಬೆನ್ನಲ್ಲೇ, ಪತ್ನಿ ಭವಾನಿಗೂ ಎದುರಾದ ಸಂಕಷ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪತಿ ರೇವಣ್ಣ ಬಂಧನದ ನಂತರ ಪತ್ನಿ ಭವಾನಿ ಕೂಡ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ.ರೇವಣ್ಣ ಅವರನ್ನು ಬಂಧಿಸಲಾಗಿದೆ. ಭವಾನಿ ರೇವಣ್ಣ ಕರೆಯುತ್ತಿದ್ದಾರೆ ಎಂದು ಹೇಳಿ ತನ್ನ ತಾಯಿಯನ್ನು ಸತೀಶ್‌ ಬಾಬು ಕರೆದೊಯ್ದಿದ್ದಾನೆ ಎಂದು ಆಕೆಯ ಪುತ್ರ ದೂರು ನೀಡಿದ್ದ

ಈ ಪ್ರಕರಣದಲ್ಲಿ ಈಗಾಗಲೇ ಸತೀಶ್ ಬಾಬು ಹಾಗೂ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಭವಾನಿಗೆ ನೋಟಿಸ್‌ ಜಾರಿ ಮಾಡುವ ಸಾಧ್ಯತೆ ಇದೆ.

ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿದ ನಂತರ, ಎಸ್‌ಐಟಿ ಭವಾನಿ ರೇವಣ್ಣ ಅವರನ್ನು ತುರ್ತು ವಿಚಾರಣೆಗೆ ಹಾಜರಾಗುವಂತೆ ಕೇಳಿಕೊಂಡಿದ್ದಾರೆ. ವಿಚಾರಣೆ ವೇಳೆ ಸಂತ್ರಸ್ತೆಯ ಹೇಳಿಕೆಗಳ ಮೇಲೆ ಭವಾನಿ ರೇವಣ್ಣ ಭವಿಷ್ಯ ನಿಂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!