CINE | ಭಾರತದ ಬಳಿಕ ಪಾಕ್​ನಲ್ಲೂ ‘ಅಬಿರ್ ಗುಲಾಲ್’ ಸಿನಿಮಾಕ್ಕೆ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಾಕಿಸ್ತಾನಿ ನಟ ಫಹಾದ್ ಖಾನ್ ನಟಿಸಿರುವ ಭಾರತದ ಸಿನಿಮಾ ‘ಅಬಿರ್ ಗುಲಾಲ್’ ಸಿನಿಮಾದ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆ ಈಗಾಗಲೇ ಹೇಳಿದರು. ಇದು ಚಿತ್ರತಂಡಕ್ಕೆ ಭಾರಿ ದೊಡ್ಡ ಪೆಟ್ಟು ನೀಡಿದೆ. ಇದೀಗ ಈ ಸಿನಿಮಾ ಅನ್ನು ಪಾಕಿಸ್ತಾನವೂ ಸಹ ನಿಷೇಧಿಸಿದೆ!

ಪಾಕಿಸ್ತಾನದ ಸಿನಿಮಾ ವಿತರಕ ಸತೀಶ್ ಆನಂದ್ ಈ ಬಗ್ಗೆ ಮಾತನಾಡಿದ್ದು, ‘ಅಬಿರ್ ಗುಲಾಲ್’ ಸಿನಿಮಾ ಅನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಲಾಗುತ್ತಿಲ್ಲ. ಆ ಸಿನಿಮಾನಲ್ಲಿ ಭಾರತದ ನಾಯಕಿ ಇದ್ದಾಳೆಂಬ ಕಾರಣಕ್ಕೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡಲಾಗಿಲ್ಲ’ ಎಂದಿದ್ದಾರೆ. ‘ಕೆಟ್ಟ ರಿಲೀಸ್ ಟೈಮಿಂಗ್​ ನಿಂದಾಗಿ ಸಿನಿಮಾದ ನಿರ್ಮಾಪಕರು, ವಿತರಕರು ಭಾರಿ ನಷ್ಟ ಅನುಭವಿಸುವಂತಾಗಿದೆ’ ಎಂದಿದ್ದಾರೆ. ಸಿನಿಮಾದಲ್ಲಿ ಪಾಕಿಸ್ತಾನಿ ನಟ ಇದ್ದಾನೆಂದು ಭಾರತದಲ್ಲಿ, ಅದೇ ಸಿನಿಮಾದಲ್ಲಿ ಭಾರತೀಯ ನಟಿ ಇದ್ದಾಳೆಂದು ಪಾಕಿಸ್ತಾನದಲ್ಲಿ ‘ಅಬಿರ್ ಗುಲಾಲ್’ ಸಿನಿಮಾಕ್ಕೆ ನಿಷೇಧ ಹೇರಲಾಗಿದೆ ಎನ್ನಲಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!