ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯನಾಡ್ ಜಿಲ್ಲೆಯ ಮಾನಂಥವಾಡಿ ಪುರಸಭೆಯು ರೈಲ್ವೆ ಜಂಕ್ಷನ್ಗೆ ಭಾರತ ಮಹಿಳೆಯರ ತಂಡಕ್ಕೆ ಪದಾರ್ಪಣೆ ಮಾಡಿರುವ ಕೇರಳದ ಯುವ ಕ್ರಿಕೆಟರ್ ಮಿನ್ನು ಮಣಿ ಅವರ ಹೆಸರನ್ನು (Indian Railway) ಮರುನಾಮಕರಣ ಮಾಡಲಾಗಿದೆ. ಹೀಗಾಗಿ ಇನ್ಮುಂದೆ ಮೈಸೂರು ರೋಡ್ ಜಂಕ್ಷನ್ ಅನ್ನು ‘ಮಿನ್ನು ಮಣಿ ಜಂಕ್ಷನ್’ ಎಂದು ಕರೆಯಲಾಗುತ್ತದೆ.
ಯುವ ಕ್ರಿಕೆಟರ್ ಮಿನ್ನು ಮಣಿ ಮಾನಂತವಾಡಿಯಲ್ಲಿರುವ ತಮ್ಮ ಮನೆಗೆ ರಸ್ತೆಯೇ ಇಲ್ಲದಿದ್ದರೂ, ಊರಿನ ಜನರು ಪ್ರಮುಖ ಜಂಕ್ಷನ್ಗೆ ಹೆಸರನ್ನು ಇಟ್ಟಿರುವುದಕ್ಕೆ 24 ವರ್ಷದ ಕ್ರಿಕೆಟರ್ ಸಂತೋಷಪಟ್ಟಿದ್ದಾರೆ.
ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಟಿ 20 ಐ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಮಣಿ ಮೂರು ಪಂದ್ಯಗಳ ಟಿ 20 ಐ ಸರಣಿಯನ್ನು 2-1 ರಿಂದ ಗೆಲ್ಲಲು ಭಾರತಕ್ಕೆ ಸಹಾಯ ಮಾಡಿದ್ದರು.
ಇದು ಅನಿರೀಕ್ಷಿತ ಮತ್ತು ನಾನು ತುಂಬಾ ಖುಷಿಯಲ್ಲಿದ್ದೇ ಎಂದು ಮಿನ್ನು ಮಣಿ ತಿಳಿಸಿದ್ದಾರೆ.
This junction in #Wayanad, #Kerala, will always act as a reminder to follow your dreams 😍#Minnu_Mani's hometown surprised her with a special gift to honour her maiden #TeamIndia call-up and exceptional performances in the #BANvIND T20Is. pic.twitter.com/UWV8edz4nQ
— Kerala INFRA (@KeralaINFRA) July 23, 2023
ಕ್ರಿಕೆಟ್ ಆಟಗಾರ್ತಿಯನ್ನು ಗೌರವಿಸಲು ನಡೆದ ಸಭೆಯಲ್ಲಿ, ಪ್ರಮುಖ ನಾಯಕರು ಮಿನ್ನುಮಣಿಯ ಮನೆಗೆ ರಸ್ತೆಯನ್ನು ನಿರ್ಮಿಸುವ ಭರವಸೆ ನೀಡಿದರು. ಪುರಸಭೆಯ ರಸ್ತೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಮಣಿ ಅವರ ಮನೆಗೆ ರಸ್ತೆ ನಿರ್ಮಿಸಲು ಚರ್ಚೆ ನಡೆಯುತ್ತಿದೆ ಎಂದು ಮನಂತವಾಡಿ ಶಾಸಕ ಒ.ಆರ್. ಕೇಲು ಹೇಳಿದ್ದಾರೆ .
ಭಾರತ ಕ್ರಿಕೆಟ್ ಆಟಗಾರ್ತಿಯ ಮನೆಗೆ ಶೀಘ್ರದಲ್ಲೇ ರಸ್ತೆ ನಿರ್ಮಾಣವಾಗಲಿದೆ. ಜುಲೈ 14 ರಂದು ನಡೆದ ಮಾನಂತವಾಡಿ ಪುರಸಭೆಯ ಸಭೆಯಲ್ಲಿ ಪುರಸಭೆಯ ‘ಮೈಸೂರು ರಸ್ತೆ ಜಂಕ್ಷನ್’ ಅನ್ನು ‘ಮಿನ್ನು ಮಣಿ ಜಂಕ್ಷನ್’ ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಯಿತು ಎಂದು ಶಾಸಕ ಕೇಲು ಹೇಳಿದ್ದಾರೆ.