Tuesday, October 3, 2023

Latest Posts

ಅಪಹರಣ,ಕೊಲೆ ಪ್ರಕರಣ: ಮುಖ್ತಾರ್ ಅನ್ಸಾರಿಯ ಸಹೋದರ ಅಫ್ಜಲ್​​ ಅನ್ಸಾರಿಗೆ ಜಾಮೀನು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಗ್ಯಾಂಗ್​​ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿಯ ಸಹೋದರ ಅಫ್ಜಲ್ ಅನ್ಸಾರಿ (Afzal Ansari ) ಗೆ ಅಲಹಾಬಾದ್ ಹೈಕೋರ್ಟ್‌ (Allahabad High Court) ಜಾಮೀನು ನೀಡಿದೆ.

ಈ ವೇಳೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ತಡೆಹಿಡಿಯಲು ನ್ಯಾಯಾಲಯ ನಿರಾಕರಿಸಿದೆ. ಗಾಜಿಪುರದ ಲೋಕಸಭಾ ಸದಸ್ಯ ಅಫ್ಜಲ್ ಅನ್ಸಾರಿಗೆ ಎಂಪಿ/ಎಂಎಲ್ಎ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಗಾಜಿಪುರದ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದ ಕಾರಣ ಮೇ ತಿಂಗಳಲ್ಲಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು.

ಹೀಗಾಗಿ ಶಿಕ್ಷೆಯನ್ನು ತಡೆಹಿಡಿಯಬೇಕು ಮತ್ತು ಜಾಮೀನು ನೀಡುವಂತೆ ಕೋರಿ ಅನ್ಸಾರಿ ನ್ಯಾಯಾಲಯದ ಮೊರೆ ಹೋಗಿದ್ದರು.

1997 ರಲ್ಲಿ ವಾರಣಾಸಿ ಮೂಲದ ವ್ಯಾಪಾರಿ ನಂದ್ ಕಿಶೋರ್ ರುಂಗ್ಟಾ ಅವರನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣ, 2005 ರ ನವೆಂಬರ್ 29 ರಂದು ಗಾಜಿಪುರದ ಆಗಿನ ಶಾಸಕ ಕೃಷ್ಣಾನಂದ ರಾಯ್ ಅವರ ಹತ್ಯೆಯಲ್ಲಿಯೂ ಅನ್ಸಾರಿ ಭಾಗಿಯಾಗಿದ್ದರು.10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಮುಖ್ತಾರ್ ಅನ್ಸಾರಿ 2006 ರಿಂದ ಜೈಲಿನಲ್ಲಿದ್ದು, ಅವರ ವಿರುದ್ಧ ಕೊಲೆ ಮತ್ತು ಅಪಹರಣ ಸೇರಿದಂತೆ 40 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!