ನಂದಿನಿ ಹಾಲಿನ ಬಳಿಕ ಮೊಸರಿನ ದರ ಏರಿಕೆ ಶಾಕ್: ಪ್ರತಿ ಲೀಟರ್ ಗೆ 4 ರೂ ಹೆಚ್ಚಳ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ ರೂ.4 ಹೆಚ್ಚಳ ಬೆನ್ನಲ್ಲೇ ನಂದಿನಿ ಮೊಸರಿನ ದರವನ್ನು ಪರಿಷ್ಕರಿಸಲಾಗಿದೆ. ಪ್ರತಿ ಲೀಟರ್ ಮೊಸರಿನ ದರವನ್ನು 4 ರೂ ಹೆಚ್ಚಳ ಮಾಡಲಾಗಿದೆ.

ಈ ಬಗ್ಗೆ ಕರ್ನಾಟಕ ಹಾಲು ಮಹಾಮಂಡಲ(KMF) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ಹಾಲು ಮಹಾಮಂಡಳ (ಕೆ.ಎಂ.ಎಫ್) ಕಳೆದ ಐದು ದಶಕಗಳಿಂದ ರಾಜ್ಯದ ಹಾಲು ಉತ್ಪಾದಕರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ರೈತರ ಆರ್ಥಿಕ ಸದೃಡತೆಗಾಗಿ ಕೆಲಸ ಮಾಡುತ್ತಿದೆ. ಕೆ.ಎಂ.ಎಫ್‌ನ ಸದಸ್ಯ ಒಕ್ಕೂಟಗಳು ಹಾಲು ಉತ್ಪಾದಕರಿಂದ ಹಾಲು ಖರೀದಿಸಿ, ಸಂಸ್ಕರಿಸಿ, ನಂದಿನಿ ಬ್ರಾಂಡ್ ಅಡಿಯಲ್ಲಿ ವಿವಿಧ ಬಗೆಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದೆ ಎಂದಿದೆ.

26.84 ಲಕ್ಷ ಹೈನುಗಾರ ರೈತರ ಪೈಕಿ ಸರಾಸರಿ 8.90 ಲಕ್ಷ ರೈತರು ಪ್ರತಿ ದಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿದ್ದಾರೆ. ದೇಶದ ಎರಡನೇ ಅತಿದೊಡ್ಡ ಸಹಕಾರ ಹೈನೋದ್ಯಮವಾಗಿರುವ ಕೆ.ಎಂ.ಎಫ್, ಗ್ರಾಹಕರಿಂದ ಬರುವ ಪ್ರತಿಯೊಂದು ರೂಪಾಯಿಯಲ್ಲಿ 80 ಪೈಸೆಗಿಂತ ಹೆಚ್ಚು ಹಣ ರೈತರಿಗೆ ನೇರವಾಗಿ ನೀಡುತ್ತಿದೆ. ಪ್ರತಿದಿನ, ರಾಜ್ಯದ ಹಾಲು ರೂ.28.60 ಕೋಟಿ ಹಣ ನೇರವಾಗಿ ಪಾವತಿ ಉತ್ಪಾದಕರಿಗೆ ಸರಾಸರಿ ಮಾಡಲಾಗುತ್ತಿದೆ ಎಂಬುದಾಗಿ ತಿಳಿಸಿದೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚಗಳನ್ನು ಪರಿಗಣಿಸಿ ರಾಜ್ಯದಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರ್,ಕೆಜಿಗೆ ರೂ.4-ರಂತೆ ಹೆಚ್ಚಿಸಲು ಸಮ್ಮತಿಸಲಾಯಿತು.

ಪ್ರಮುಖ ಹಾಲಿನ ಮಾದರಿಗಳ ಮತ್ತು ಮೊಸರಿನ ಪರಿಷ್ಕರಿಸಿದ ಮಾರಾಟ ದರಗಳ ವಿವರಗಳು
ಟೋನ್ಡ್ ಹಾಲು – ನೀಲಿ ಪೊಟ್ಟಣ : 42 ರಿಂದ 46 ರೂಗೆ ಎರಿಕೆ
ಹೋಮೋಜೀನೈಡ್ ಟೋನ್ಡ್ ಹಾಲು : 43 ರಿಂದ ರೂ.47ಕ್ಕೆ ಏರಿಕೆ.
ಹಸುವಿನ ಹಾಲು (ಹಸಿರು ಪೊಟ್ಟಣ) : 46 ರಿಂದ 50 ರೂಗೆ ಏರಿಕೆ
ಶುಭಂ (ಕೇಸರಿ ಪೊಟ್ಟಣ), ಸ್ಪೆಷಲ್ ಹಾಲು : 48 ರಿಂದ 52 ರೂಪಾಯಿಗೆ ಏರಿಕೆ
ಮೊಸರು, ಪ್ರತಿ ಕೆಜಿಗೆ: 50ರಿಂದ 54 ರೂಪಾಯಿಗೆ ಏರಿಕೆ

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!