ಹೊಸದಿಗಂತ ವರದಿ, ಮಡಿಕೇರಿ:
ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಡನೆ ದಕ್ಷಿಣ ಕೊಡಗಿನ ಕೋತೂರು ಗ್ರಾಮದಲ್ಲಿ ನಡೆದಿದೆ.
ಕೋತೂರು ಬೊಮ್ಮಾಡು ಹಾಡಿ ನಿವಾಸಿ ಜೇನು ಕುರುಬರ ದಾಸ (52) ಎಂಬವರೇ ಹುಲಿ ದಾಳಿಗೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾದ ದುರ್ದೈವಿಯಾಗಿದ್ದಾರೆ.
ಸರ್ಕಾರದ ನಿರ್ಲಕ್ಷ್ಯ ಧೋರಣೆ ಹಾಗೂ ಅರಣ್ಯ ಅಧಿಕಾರಿಗಳ ನಿರ್ಲಕ್ಷತನದಿಂದ ಹುಲಿ ದಾಳಿಗೆ ವ್ಯಕ್ತಿ ಬಲಿಯಾಗಿದ್ದು, ಇದಕ್ಕೆ ಅರಣ್ಯ ಇಲಾಖೆಯವರೇ ನೇರ ಹೊಣೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾನಂಡ ಪೃಥ್ಯು ಆರೋಪಿಸಿದ್ದಾರೆ.
ಹುಲಿ ಹಿಡಿಯುವ ನಾಟಕವಾಡುವ ಅರಣ್ಯ ಇಲಾಖೆ ಅದೇ ಹುಲಿಯನ್ನು ಕೊಡಗಿನ ಇನ್ನೊಂದು ಪ್ರದೇಶದಲ್ಲಿ ಬಿಟ್ಟು ಮನುಷ್ಯರ ಜೀವ ತೆಗೆಯುತ್ತಿದೆ. ಹಲವಾರು ಜೀವ ಹೋದರೂ ಸರಕಾರ ಕೂಡಾ ಕಣ್ಣು ಮುಚ್ಚಿ ಮಲಗಿದೆ. ಜೀವಕ್ಕೆ ಕೊಡಗಿನಲ್ಲಿ ಬೆಲೆಯೇ ಇಲ್ಲದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ಹುಲಿ ಗ್ರಾಮದಲ್ಲಿ ಹಸುವೊಂದರ ಮೇಲೂ ದಾಳಿ ನಡೆಸಿರುವುದಾಗಿ ಹೇಳಲಾಗಿದೆ.