ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿಗರ ನಿದ್ದೆ ಕೆಡಿಸಿದ್ದ ಚಿರತೆ ಪ್ರಕರಣ ನಿನ್ನೆ ಅಂತ್ಯವಾಗಿದ್ದು, ಅರಣ್ಯಾಧಿಕಾರಿಗಳು ಚಿರತೆಯನ್ನು ಗುಂಡಿಕ್ಕಿ ಕೊಂದಿದ್ದಾರೆ, ಈ ಬಗ್ಗೆ ಇದೀಗ ಚರ್ಚೆ ಆರಂಭವಾಗಿದ್ದು, ಅರಣ್ಯಾಧಿಕಾರಿಗಳ ನಡೆಗೆ ಜನಾಕ್ರೋಶ ವ್ಯಕ್ತವಾಗಿದೆ.
ಬೆಂಗಳೂರಿನ ಕೃಷ್ಣಾರೆಡ್ಡಿ ಲೇಔಟ್‌ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನರು ಹೆದರಿದ್ದರು. ಚಿರತೆ ಹಿಡಿಯಲು ಹರಸಾಹಸ ಮಾಡಲಾಗಿತ್ತು. ಚಿರತೆ ರೆಸ್ಕ್ಯೂ ಸಂದರ್ಭದಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿದ್ದ ವೈದ್ಯರ ಮೇಲೆ ಚಿರತೆ ದಾಳಿ ಮಾಡಿ ಎಸ್ಕೇಪ್ ಆಗಿತ್ತು.
ಇದಾದ ಕೆಲವೇ ಸಮಯದಲ್ಲಿ ಚಿರತೆ ಕಾಣಿಸಿದ್ದು, ಅಧಿಕಾರಿಗಳು ಗುಂಡಿಟ್ಟು ಕೊಂದಿದ್ದರು, ಈ ಬಗ್ಗೆ ಚರ್ಚೆ ಆರಂಭವಾಗಿದ್ದು, ಚಿರತೆಯನ್ನು ಜೀವಂತವಾಗಿ ಹಿಡಿದು ಕಾಡಿಗೆ ಬಿಡಬೇಕಿತ್ತು ಎನ್ನುವುದು ಜನಾಭಿಪ್ರಾಯವಾಗಿದೆ.
ಅರಣ್ಯ ಇಲಾಖೆ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕಿತ್ತು, ಆದರೆ ಅವರೇ ಚಿರತೆ ಹತ್ಯೆ ಮಾಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಪ್ರಾಣಿಗಳ ಕಥೆಯೇನು ಅನ್ನೋದು ಜನರ ಪ್ರಶ್ನೆಯಾಗಿದೆ.
https://twitter.com/NrjNambo/status/1719741339829448806/photo/1