February 3, 2026
Tuesday, February 3, 2026
spot_img

ಲಾಂಗ್‌ ವೀಕೆಂಡ್‌ ಮುಗಿಸಿ ರಿಯಾಲಿಟಿಗೆ ಎಂಟ್ರಿ! ನೆಲಮಂಗಲ – ಕುಣಿಗಲ್‌ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಲು ಸಾಲು ರಜೆ ಮುಗಿಸಿ ಬೆಂಗಳೂರಿನತ್ತ ಜನರು ಬರುತ್ತಿದ್ದು ನೆಲಮಂಗಲ ಕುಣಿಗಲ್ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್‌ ಸಂಭವಿಸಿದೆ.

ಮೂರು ದಿನಗಳ ರಜೆ ಇದ್ದ ಕಾರಣ ಊರಿಗೆ ತೆರಳಿದ್ದ ಜನರು ಬೆಂಗಳೂರಿಗೆ ಮರಳುತ್ತಿದ್ದರಿಂದ ಹಾಸನ-ಬೆಂಗಳೂರು ರಸ್ತೆ ಫುಲ್‌ ಜಾಮ್‌ ಆಗಿದೆ.

ಸುಮಾರು ನಾಲ್ಕು ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್‌ ಸಂಭವಿಸಿದ್ದು ವಾಹನ ಸವಾರರ ಪರದಾಟ ನಡೆಸುತ್ತಿದ್ದಾರೆ. ಟ್ರಾಫಿಕ್ ನಿಯಂತ್ರಣ ಮಾಡಲು ನೆಲಮಂಗಲ ಸಂಚಾರಿ ಪೊಲೀಸರ ಹರಸಾಹಸ ಪಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !