ಮರ್ಡರ್‌ ನಂತರ ರೇಣುಕಾಸ್ವಾಮಿ ಒಡವೆಯನ್ನೂ ದೋಚಿದ್ದ ದರ್ಶನ್‌ ಗ್ಯಾಂಗ್‌ನ ಈ ಮೆಂಬರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ಆತನ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದು ಯಾರು ಎನ್ನುವ ಮಾಹಿತಿ ಲಭ್ಯವಾಗಿದೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರವಾಗಿ ಪೊಲೀಸರು ನಿನ್ನೆ ಚಿತ್ರದುರ್ಗದಲ್ಲಿರುವ ಆರೋಪಿಗಳ ಮನೆಯಲ್ಲಿ ಸ್ಥಳ ಮಹಜರ್ ನಡೆಸಿದ್ದರು. ಆರೋಪಿ ರಘು, ಜಗ್ಗ, ಅನು, ರವಿ ಮನೆಯಲ್ಲಿ ಶೋಧ ನಡೆಸಿದ್ದರು.

ಸ್ಥಳ ಮಹಜರ್ ವೇಳೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರ್, ಆಟೋ, ಮೊಬೈಲ್ ಗಳು ಸೀಜ್ ಮಾಡಲಾಗಿದೆ. ರಘು ಅಲಿಯಾಸ್​ ರಾಘವೇಂದ್ರ ಮನೆಯಲ್ಲಿ 10 ಲಕ್ಷ ಕ್ಯಾಶ್, ಒಂದು ಚೈನ್, ಒಂದು ರಿಂಗ್, ಬೆಳ್ಳಿ ಕಡಗ, ವಾಚ್ ರಿಕವರಿ ಮಾಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಬೆನ್ನಲ್ಲೇ ಆರೋಪಿ ರಘ ಆತನ ಮೈಮೇಲಿದ್ದ ಒಡವೆ ಕೂಡಾ ಎಗರಿಸಿದ್ದಾನೆ. ಮಾತ್ರವಲ್ಲದೆ, ನಟ ದರ್ಶನ್ ಕೊಟ್ಟ 10 ಲಕ್ಷ ಹಣ ತಂದು ಹೆಂಡ್ತಿಗೆ ಕೊಟ್ಟಿದ್ದಾನೆ. ದರ್ಶನ್​ ಕೊಟ್ಟ ಹಣವನ್ನು ರಘ ತನ್ನ ಹೆಂಡತಿಯನ್ನು ಬೆಂಗಳೂರಿಗೆ ಕರೆಸಿ ಪತ್ನಿ ಸಹನಗೆ ಕೊಟ್ಟು ಕಳಿಸಿದ್ದಾನೆ. ಎಲ್ಲವನ್ನೂ ಪೊಲೀಸರು ಸೀಝ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!