ಹೊಸದಿಗಂತ ಡಿಜಿಟಲ್ ಡೆಸ್ಕ್:
ಫಿಲಿಪೈನ್ಸ್ ನಂತರ ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್( ಬಿಆರ್‌ಐ) ಯೋಜನೆಯಿಂದ ಇಟಲಿ ಹೊರಬಂದಿದೆ.
2019ರಲ್ಲಿ ಬಿಆರ್‌ಐ ಯೋಜನೆಯ ಒಪ್ಪಂದಕ್ಕೆ ಇಟಲಿ ಸಹಿ ಮಾಡಿತ್ತು, ಇದೀಗ 2024ಕ್ಕೆ ಈ ಒಪ್ಪಂದ ಮುಕ್ತಾಯವಾಗಲಿದೆ. ಕನಿಷ್ಠ ಮೂರು ತಿಂಗಳ ಮೊದಲೇ ಲಿಖಿತವಾಗಿ ತಿಳಿಸದೇ ಇದ್ದರೆ ಒಪ್ಪಂದ ಆಟೋಮ್ಯಾಟಿಕ್ ಆಗಿ ನವೀಕರಿಸಲ್ಪಡುತ್ತದೆ.
ಈ ಒಪ್ಪಂದವನ್ನು ನವೀಕರಿಸುವುದಿಲ್ಲ ಎಂದು ಇಟಲಿ ಹೇಳಿದೆ. ಈ ಯೋಜನೆಯಿಂದ ಇಟಲಿಗೆ ಲಾಭಕ್ಕಿಂತ ಹೆಚ್ಚಾಗಿ ನಷ್ಟವೇ ಆಗುವುದರಿಂದ ಒಪ್ಪಂದದಿಂದ ಇಟಲಿ ಹೊರಬಂದಿದೆ ಎನ್ನಲಾಗಿದೆ.