ʼಅಗ್ನಿಪಥ್‌ʼ ಪ್ರತಿಭಟನೆ ವೇಳೆ ಮೃತಪಟ್ಟವನ ಕುಟುಂಬಕ್ಕೆ 25 ಲಕ್ಷ ಘೋಷಿಸಿದ ತೆಲಂಗಾಣ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ʼಅಗ್ನಿಪಥ್‌ʼ ಸೇನಾ ನೇಮಕಾತಿ ವಿರುದ್ಧ ಪ್ರತಿಭಟಿಸಿಸುತ್ತಿದ್ದ ವೇಳೆ ಮೃತಪಟ್ಟ ಯುವಕನ ಕುಟುಂಬಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಈ ಟ್ವಿಟ್‌ ಮಾಡಿರುವ‌ ಸಿಎಂ ಕೆಸಿಆರ್, “ಕೇಂದ್ರದ ತಪ್ಪು ನೀತಿಗೆ ಬಲಿಯಾದ ರಾಕೇಶ್ ಅವರ ಕುಟುಂಬಕ್ಕೆ ಸಂತಾಪಗಳು. ರಾಕೇಶ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಲಾಗುವುದು ಮತ್ತು ಕುಟುಂಬದಲ್ಲಿ ಅರ್ಹರಿಗೆ ಅವರ ಅರ್ಹತೆಗೆ ಅನುಗುಣವಾಗಿ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ವಾರಂಗಲ್ ಮೂಲದ ರಾಕೇಶ್ ಅವರ ಸಾವಿನ ಬಗ್ಗೆ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್, ಪ್ರತಿಭಟನೆಯ ವೇಳೆ ಪ್ರಾಣ ಕಳೆದುಕೊಂಡ ಯುವಕನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
”ಕೇಂದ್ರ ಸರಕಾರ ಅನುಸರಿಸುತ್ತಿರುವ ತಪ್ಪು ನೀತಿಗಳಿಂದ ರಾಕೇಶ್ ಬಲಿಂದನವರ ಹತ್ಯೆಯಾಗಿದೆ ಎಂದು ಮುಖ್ಯಮಂತ್ರಿ ವಿಷಾದ ವ್ಯಕ್ತಪಡಿಸಿದರು. ತೆಲಂಗಾಣದ ಮಕ್ಕಳಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡಲಿದೆ ಎಂದು ಹೇಳಿದ್ದಾರೆ.
ಅಗ್ನಿಪಥ್‌ ಯೋಜನೆ ವಿರೋಧಿಸಿ ಸಿಕಂದರಾಬಾದ್ ನಿಲ್ದಾನದಲ್ಲಿ “ಸುಮಾರು 1500 ರಿಂದ 3000 ಜನರು ಪ್ರತಿಭಟನೆ ನಡೆಸಿದರು. ಅವರು ಕಲ್ಲು ತೂರಾಟ ನಡೆಸಿದರು ಮತ್ತು ಕೆಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸಿಕಂದರಾಬಾದ್ ರೈಲ್ವೇ ಎಸ್ಪಿ ಅನುರಾಧಾ ಹೇಳಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!