ಕೊಪ್ಪಳದಲ್ಲಿ ನವೆಂಬರ್ 26 ರಿಂದ ಅಗ್ನಿವೀರ ನೇಮಕಾತಿ ರ‍್ಯಾಲಿ

ಹೊಸದಿಗಂತ ವರದಿ, ಕಲಬುರಗಿ :

ಬೆಂಗಳೂರಿನ ಪ್ರಧಾನ ನೇಮಕಾತಿ ವಲಯ ಕಚೇರಿ ಹಾಗೂ ಬೆಳಗಾವಿ ಸೇನಾ ನೇಮಕಾತಿ ಕಚೇರಿಯಿಂದ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ 2024ರ ನವೆಂಬರ್ 26 ರಿಂದ ಡಿಸೆಂಬರ್ 8 ವರೆಗೆ ಅಗ್ನಿವೀರ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಕಚೇರಿಯ ಅಧಿಕಾರಿಗಳು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‍ಮನ್ 10ನೇ ತರಗತಿ ತೇರ್ಗಡೆ, ಅಗ್ನಿವೀರ್ ಟ್ರೇಡ್ಸ್‍ಮೆನ್ 8ನೇ ತರಗತಿ ತೇರ್ಗಡೆ, ಅಗ್ನಿವೀರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ಲಿಕಲ್ ವಿಭಾಗಗಳಿಗೆ ನೇಮಕಾತಿಗಾಗಿ ರ್ಯಾಲಿಯನ್ನು ನಡೆಯಲಿದ್ದು, ಬೆಳಗಾವಿ, ಬೀದರ, ಕಲಬುರಗಿ, ಯಾದಗಿರಿ, ರಾಯಚೂರ ಹಾಗೂ ಕೊಪ್ಪಳ ಜಿಲ್ಲೆಗಳ ಅಭ್ಯರ್ಥಿಗಳಿಗೆ ಈ ನೇಮಕಾತಿ ರ್ಯಾಲಿಯಲ್ಲಿ ಆಯೋಜಿಸಲಾಗಿದೆ.

ಆನ್‍ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ವೆಬ್‍ಸೈಟ್‍ದಲ್ಲಿ ಪ್ರಕಟಿಸಲಾಗಿದೆ. 2024ರ ಅಕ್ಟೋಬರ್ 10 ರಿಂದ ಶಾರ್ಟ್ ಲಿಸ್ಟ್‍ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರವೇಶ ಕಾರ್ಡ್‍ನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಪ್ರವೇಶ ಕಾರ್ಡ್‍ಗಳನ್ನು ಭಾರತೀಯ ಸೇನಾ ನೇಮಕಾತಿಯ ವೆಬ್‍ಸೈಟ್‍ದಲ್ಲಿ ವೈಯಕ್ತಿಕ ಖಾತೆ
ಮತ್ತು ನೋಂದಾಯಿತ ಇ-ಮೇಲ್ ಐಡಿಯನ್ನು ಲಾಗಿನ್ ಮಾಡುವ ಮೂಲಕ ಪಡೆಯಬಹುದಾಗಿದೆ.

ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳ ಆಮೀಷಕ್ಕೊಳಗಾಗಬಾರದು. ನೇಮಕಾತಿ ಪರೀಕ್ಷೆ ಹಾಗೂ ಅಂತಿಮ ಅರ್ಹತೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!