ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಮುನ್ನಡೆ ಗಳಿಸುವ ಸಾಧ್ಯತೆ ಇದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದು, ನಿರೀಕ್ಷೆ ಹೆಚ್ಚುತ್ತಿದೆ.
ಇತ್ತ ಚುನಾವಣೋತ್ತರ ಸಮೀಕ್ಷೆಗಳನ್ನು ತಳ್ಳಿ ಹಾಕಿರುವ ಎನ್‌ಸಿ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಇದು ಕೇವಲ ‘ಟೈಮ್ ಪಾಸ್’ ಎಂದಿದ್ದಾರೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ‘ಇತ್ತೀಚೆಗಿನ ಸಾರ್ವತ್ರಿಕ ಚುನಾವಣೆಯಲ್ಲಿ ವೈಫಲ್ಯದ ಬಳಿಕ ಚಾನೆಲ್‌ಗಳು ಮತಗಟ್ಟೆ ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ. ಚಾನೆಲ್, ಸಾಮಾಜಿಕ ಮಾಧ್ಯಮ, ವಾಟ್ಸ್‌ಆಯಪ್ ಇತ್ಯಾದಿಗಳಲ್ಲಿ ಬರುವ ಸಮೀಕ್ಷೆಗಳನ್ನು ನಾನು ನಿರಾಕರಿಸುತ್ತೇನೆ. ಏಕೆಂದರೆ ಅಕ್ಟೋಬರ್ 8ರಂದು ಮಾತ್ರ ಸ್ಪಷ್ಟ ಅಂಕಿ ಗೊತ್ತಾಗಲಿದೆ. ಉಳಿದೆಲ್ಲವೂ ಕೇವಲ ‘ಟೈಮ್ ಪಾಸ್’ ಎಂದು ಹೇಳಿದ್ದಾರೆ.