ಚೀನಾ ಜೊತೆಗಿನ ಒಪ್ಪಂದ: ಪೂರ್ವ ಲಡಾಖ್ ನಲ್ಲಿ ಗಸ್ತು ಆರಂಭಿಸಿದ ಭಾರತೀಯ ಸೇನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಚೀನಾ ಜೊತೆಗಿನ ಒಪ್ಪಂದದ ಬಳಿಕ ಭಾರತೀಯ ಸೇನಾ ಪಡೆಗಳು ಪೂರ್ವ ಲಡಾಖ್‌ನಲ್ಲಿ ಗಸ್ತು ತಿರುಗುವಿಕೆ ಪುನರಾರಂಭಿಸಿವೆ.

ಶುಕ್ರವಾರ ಪೂರ್ವ ಲಡಾಖ್‌ನ ಡೆಮ್‌ಚೋಕ್ ಸೆಕ್ಟರ್‌ನಲ್ಲಿ ಗಸ್ತು ತಿರುಗಲು ಪ್ರಾರಂಭಿಸಿದವು. ಭಾರತೀಯ ಸೇನಾ ಮೂಲಗಳ ಪ್ರಕಾರ, ಮುಂಬರುವ ದಿನಗಳಲ್ಲಿ ಡೆಪ್ಸಾಂಗ್ ಸೆಕ್ಟರ್‌ನಲ್ಲಿ ಗಸ್ತು ಕೂಡ ಪ್ರಾರಂಭವಾಗುವ ನಿರೀಕ್ಷೆಯಿದೆ.

ಅಕ್ಟೋಬರ್ 21 ರಂದು ಭಾರತೀಯ ಸೇನೆ ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ಗಡಿರೇಖೆಯ(ಎಲ್‌ಎಸಿ) ಪೂರ್ವ ಲಡಾಖ್ ಸೆಕ್ಟರ್‌ನಲ್ಲಿರುವ ಡೆಪ್ಸಾಂಗ್ ಬಯಲು ಮತ್ತು ಡೆಮ್‌ಚೋಕ್ ಪ್ರದೇಶದಲ್ಲಿ ತಮ್ಮ ಪಡೆಗಳ ವಿಯೋಜನೆ ಪ್ರಕ್ರಿಯೆ ಪ್ರಾರಂಭಿಸಿದವು.ತಮ್ಮ ಡೇರೆಗಳು, ವಾಹನಗಳು ಮತ್ತು ಇತರ ಮೂಲಸೌಕರ್ಯಗಳೊಂದಿಗೆ ತಮ್ಮ ಮೂಲ ಸ್ಥಾನಗಳಿಗೆ ಹಿಂತಿರುಗಿದ್ದು, ಅಕ್ಟೋಬರ್ 31 ರಂದು ಈ ಪ್ರಕ್ರಿಯೆಯು ಪೂರ್ಣಗೊಂಡಿತು.

ಡೆಪ್ಸಾಂಗ್ ಬಯಲು ಪ್ರದೇಶದ ವೈ-ಜಂಕ್ಷನ್ ಪ್ರದೇಶವನ್ನು ‘ಬಾಟಲ್‌ನೆಕ್ ಏರಿಯಾ’ ಎಂದೂ ಕರೆಯುತ್ತಾರೆ. ಇದು ಭಾರತಕ್ಕೆ ಐದು ಗಸ್ತು ಕೇಂದ್ರಗಳಿಗೆ ಪ್ರವೇಶವನ್ನು ನೀಡುತ್ತದೆ. ಈ ಸ್ಥಳಗಳಲ್ಲಿ ಗಸ್ತು ತಿರುಗದಂತೆ ಚೀನಿಯರು ಸೇನೆಯನ್ನು ನಿರ್ಬಂಧಿಸಿದ್ದರು. ಆದರೆ ಇದೀಗ ದಿಗ್ಬಂಧನವನ್ನು ತೆಗೆದುಹಾಕಲಾಗುವುದು ಎಂದು ಹೇಳಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!