‘ಎಡಗೈನಲ್ಲಿ ಒಬ್ಬ ವ್ಯಕ್ತಿ ಬರೆಯುತ್ತಿರುವ ಚಿತ್ರವನ್ನು AI ಆ್ಯಪ್​ಗಳು ಬಿಡಿಸಲು ಸಾಧ್ಯವಿಲ್ಲ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ರಾನ್ಸ್ ರಾಜಧಾನಿಯಲ್ಲಿ ನಡೆಯುತ್ತಿರುವ ಎಐ ಆ್ಯಕ್ಷನ್ ಸಮಿಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ ಎಐ ಆ್ಯಪ್​ಗಳಲ್ಲಿರುವ ಒಂದು ದೋಷವನ್ನು ಎತ್ತಿತೋರಿಸಿದರು. ಎಡಗೈನಲ್ಲಿ ಒಬ್ಬ ವ್ಯಕ್ತಿ ಬರೆಯುತ್ತಿರುವ ಚಿತ್ರವನ್ನು ಎಐ ಆ್ಯಪ್​ಗಳು ಬಿಡಿಸಲು ಆಗುವುದಿಲ್ಲ ಎಂದು ಮೋದಿ ಹೇಳಿದರು.

‘ನೀವು ಎಐ ಆ್ಯಪ್​ನಲ್ಲಿ ಮೆಡಿಕಲ್ ರಿಪೋರ್ಟ್ ಅಪ್​ಲೋಡ್ ಮಾಡಿದರೆ ಅದು ಬಹಳ ಸರಳವಾಗಿ ನಿಮ್ಮ ಆರೋಗ್ಯದ ಬಗ್ಗೆ ವಿವರಣೆ ನೀಡುತ್ತದೆ. ಅದೆ ಅ್ಯಪ್​ಗೆ ನೀವು ಎಡಗೈನಲ್ಲಿ ಬರೆಯುತ್ತಿರುವ ವ್ಯಕ್ತಿಯ ಚಿತ್ರ ಬಿಡಿಸಲು ಹೇಳಿದರೆ ಬಹುತೇಕ ಅದು ಬಲಗೈನಲ್ಲಿ ಬರೆಯುತ್ತಿರುವ ಚಿತ್ರ ತೋರಿಸುತ್ತದೆ. ಟ್ರೈನಿಂಗ್ ಡಾಟಾ ಈ ರೀತಿ ಮೂಡಿಸಲಾಗಿರುವುದು ಇದಕ್ಕೆ ಕಾರಣ’ ಎಂದು ಪ್ಯಾರಿಸ್ ಸಭೆಯಲ್ಲಿ ಮೋದಿ ತಿಳಿಸಿದ್ದಾರೆ.

ಇಂಟರ್ನೆಟ್​ನಲ್ಲಿ ಲಕ್ಷಾಂತರ ಜನರು ಗ್ರೋಕ್, ಚ್ಯಾಟ್​ಜಿಪಿಟಿ, ಜೆಮಿನಿ ಇತ್ಯಾದಿ ಎಐ ಆ್ಯಪ್​ಗಳಲ್ಲಿ ಎಡಗೈನಲ್ಲಿ ವ್ಯಕ್ತಿ ಬರೆಯುತ್ತಿರುವ ಚಿತ್ರಗಳನ್ನು ಜನರೇಟ್ ಮಾಡಲು ಯತ್ನಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!