‘ಭವಿಷ್ಯ’ಕ್ಕೂ ಹೊಸ ಭಾಷ್ಯ ಬರೆಯುತ್ತಿದೆ AI: ಲೋಕಸಭಾ ಚುನಾವಣೆ ಗೆಲುವು ಯಾರಿಗೆ ಎಂದು ಇದಕ್ಕೆ ಗೊತ್ತು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆ ಹತ್ತಿರವಾದಂತೆ ಇದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಜ್ಯೋತಿಷಿಗಳು ಗ್ರಹಗತಿಗಳ ಆಧಾರದಲ್ಲಿ ಭವಿಷ್ಯ ನುಡಿಯುವ ‘ಸಂಪ್ರದಾಯ’ ಮೊದಲಿಂದಲೂ ನಡೆದು ಬರುತ್ತಿದೆ. ಈ ಬಾರಿ ವಿಶೇಷ ಎಂದರೆ ಲೋಕಸಭೆ ಅಖಾಡದಲ್ಲಿ ಏನಾಗಲಿದೆ ಎಂಬುದನ್ನು ಎಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ತನ್ನಲ್ಲಿ ಅಡಕವಾದ ಡೇಟಾಗಳ ಮೂಲಕ ಭವಿಷ್ಯ ನುಡಿಯುತ್ತಿದೆ!
ಈ ಹಿಂದೆ ನಡೆದ ಬೆಳವಣಿಗೆ ಹಾಗೂ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಡೇಟಾ ಪರಿಷ್ಕರಿಸಿ ಎಐ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಬರಬಹುದು ಎಂದು ಭವಿಷ್ಯ ನುಡಿಯುತ್ತಿದೆ. ಇದಲ್ಲದೆ, ಚುನಾವಣೆಯಲ್ಲಿ ಪಕ್ಷಗಳು ಯಾವೆಲ್ಲ ಸವಾಲುಗಳನ್ನು ಎದುರಿಸಬಹುದು ಎಂಬ ಬಗ್ಗೆಯೂ ಅದು ವಿಶ್ಲೇಷಣೆ ನೀಡುತ್ತಿದೆ.
ಪ್ರತೀ ಪಕ್ಷಗಳ ಬಗ್ಗೆ ಕರಾರುವಕ್ಕಾಗಿ ಅಂಕಿ ಅಂಶ ನೀಡುತ್ತಿರುವ ಎಐ, ಈ ಬಾರಿ ಇದು ನಿಜವಾದರೆ ಚುನಾವಣಾ ಫಲಿತಾಂಶಗಳ ಬಗ್ಗೆ ಭವಿಷ್ಯವಾಣಿಗಳ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!