ವೈದ್ಯರು ಶಿಕ್ಷಕರ ಜಾಗಕ್ಕೆ AI ಬರುತ್ತೆ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಉದ್ಯಮಿ ಬಿಲ್​ ಗೇಟ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೃತಕ ಬುದ್ಧಿಮತ್ತೆಯಂಥ ತಂತ್ರಜ್ಞಾನದಿಂದ ಇದಾಗಲೇ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದೇ ರೀತಿ ಆವಿಷ್ಕಾರ ಆಗುತ್ತಲೇ ಇರುವ ಕಾರಣದಿಂದ ಮುಂದೆ ಭವಿಷ್ಯದಲ್ಲಿ ವೈದ್ಯರು ಮತ್ತು ಶಿಕ್ಷಕರ ಜಾಗಕ್ಕೆ ಎಐ ಬರುತ್ತದೆ ಎಂದು ಉದ್ಯಮಿ ಬಿಲ್​ ಗೇಟ್ಸ್ ಹೇಳಿದ್ದಾರೆ.

ಮುಂದೆ ಬರಬರುತ್ತಾ ಮನುಷ್ಯರ ಅವಶ್ಯಕತೆಗಳೇ ಇರುವುದಿಲ್ಲ. ಅದರಲ್ಲಿಯೂ ಮುಖ್ಯವಾಗಿ ವೈದ್ಯರು ಮತ್ತು ಶಿಕ್ಷಕರ ಜಾಗಕ್ಕೆ ಎಐ ಬರುವ ಕಾರಣ, ಅವರ ಅವಶ್ಯಕತೆಯೂ ಇರುವುದಿಲ್ಲ. ಇದೆಲ್ಲಾ ಬರಲು ಹತ್ತೇ ವರ್ಷಗಳ ಸಾಕು ಎಂದಿದ್ದಾರೆ.

ಜಗತ್ತು ಹೊಸ ಯುಗವನ್ನು ಪ್ರವೇಶಿಸುತ್ತಿದೆ. ಉತ್ತಮ ಔಷಧಗಳು ಮತ್ತು ರೋಗನಿರ್ಣಯದಿಂದ ಹಿಡಿದು AI ಬೋಧಕರು ಮತ್ತು ವರ್ಚುವಲ್ ಸಹಾಯಕರವರೆಗೆ AI ನಮ್ಮ ಜೀವನದ ಬಹುತೇಕ ಪ್ರತಿಯೊಂದು ಅಂಶವನ್ನು ಸ್ಪರ್ಶಿಸುತ್ತದೆ. ಈ ಬೆಳವಣಿಗೆ ವೇಗವಾಗಿ ನಡೆಯುತ್ತಿದೆ.

ಮಾರಕ ಕಾಯಿಲೆಗಳಿಗೆ ಯಶಸ್ವಿ ಚಿಕಿತ್ಸೆಗಳು, ಹವಾಮಾನ ಬದಲಾವಣೆಗೆ ಉತ್ತಮ ಪರಿಹಾರಗಳು ಮತ್ತು ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಲಿದೆ ಎಂದು ಬಿಲ್​ ಗೇಟ್ಸ್ ಹೇಳಿದ್ದಾರೆ. ಆದರೆ ಇದೀಗ ಉದ್ಯೋಗಿಗಳಿಗೆ ಆತಂಕವನ್ನು ಸೃಷ್ಟಿಸುತ್ತಿದೆ. ವೈದ್ಯಕೀಯ ಶಿಕ್ಷಣಕ್ಕೆ ಕೋಟಿಗಟ್ಟಲೆ ಹಣ ಸುರಿದು, ಅದಕ್ಕಿಂತ ಡಬಲ್​ ಹಣವನ್ನು ರೋಗಿಗಳಿಂದ ವಸೂಲಿ ಮಾಡಲು ಕಾಯುತ್ತಿರುವ ಭಾವಿ ವೈದ್ಯರಿಗೆ ಇದು ಭಾರಿ ಆಘಾತಕಾರಿಯಾಗುತ್ತಿದೆ.

ಆದರೆ ಒಂದು ಯಂತ್ರ ಎಷ್ಟರಮಟ್ಟಿಗೆ ಫಲಿತಾಂಶ ನೀಡುತ್ತದೆ ಎನ್ನುವುದು ಕೂಡ ಇಲ್ಲಿ ಪ್ರಶ್ನಾರ್ಹವಾಗಿದೆ. ಒಂದು ಕಡೆ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಎಐ ಬಂದ ಮೇಲೆ, ಅದರಲ್ಲಿ ನುರಿತರಾದವರಿಗೆ ಉದ್ಯೋಗದ ಅವಕಾಶ ಹೇರಳವಾಗಿ ಸಿಗಲಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!