ಹೊಸದಿಗಂತ ಡಿಜಿಟಲ್ ಡೆಸ್ಕ್
2027 ರ ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಮೆಂಟ್ ಅನ್ನು ಆಯೋಜಿಸಿಸುವ ತನ್ನ ಪ್ರಯತ್ನವನ್ನು ಭಾರತ ಸೋಮವಾರ ಹಿಂತೆಗೆದುಕೊಂಡಿದೆ.
ಈ ಹಂತದಲ್ಲಿ ಅಷ್ಟೊಂದು ದೊಡ್ಡ ಸ್ಪರ್ಧೆಯನ್ನು ಆಯೋಜಿಸುವುದು ತನ್ನ “ಕಾರ್ಯತಂತ್ರದ ಆದ್ಯತೆಗಳಲ್ಲಿ” ಅಲ್ಲ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಘೋಷಿಸಿದೆ.
ಅಕ್ಟೋಬರ್‌ನಲ್ಲಿ ಇರಾನ್ ಮತ್ತು ಉಜ್ಬೇಕಿಸ್ತಾನ್‌ನಂತಹ ರಾಷ್ಟ್ರಗಳು ರೇಸ್‌ನಿಂದ ಹಿಂದೆ ಸರಿದ ನಂತರ 2027 ರ ಟೂರ್ನಿ ಆಯೋಜಿಸಲು ಭಾರತ ಮತ್ತು ಸೌದಿ ಅರೇಬಿಯಾ ಮಾತ್ರ ಬಿಡ್ಡರ್‌ಗಳಾಗಿ ಉಳಿದಿದ್ದವು. ಇದೀಗ ಟೂರ್ನಿಯ ಆತಿಥ್ಯ ಸೌದಿಗೆ ಲಭಿಸುವುದು ಖಚಿತವಾಗಿದೆ. 2020 ರಲ್ಲಿ ಪ್ರಫುಲ್ ಪಟೇಲ್ ಎಐಎಫ್‌ಎಫ್ ಅಧ್ಯಕ್ಷರಾಗಿದ್ದಾಗ ಭಾರತ ಅಭಿಮಾನಿಗಳ ಒತ್ತಾಸೆ ಮೇರೆಗೆ ಬಿಡ್ ಸಲ್ಲಿಸಿತು. ಆದರೆ ಪ್ರಸ್ತುತ ಕಲ್ಯಾಣ್ ಚೌಬೆ ಅಧ್ಯಕ್ಷತೆಯಲ್ಲಿ ʼದೇಶದಲ್ಲಿ ಫುಟ್‌ಬಾಲ್ ಕ್ರೀಡೆಯ ಅಡಿಪಾಯವನ್ನು ತಳಮಟ್ಟದ ನಿರ್ಮಿಸುವುದಕ್ಕೆʼ ಮೊದಲ ಆದ್ಯತೆ ನೀಡಲಾಗುತ್ತದೆ. ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕಿಂತ ಫುಟ್ಬಾಲ್ ತಳಮಟ್ಟದಿಂದ ಅಭಿವೃದ್ಧಿ ಪಡಿಸುವುದು ನಮ್ಮ ಗುರಿ ಎಂದು ಸಂಸ್ಥೆ ಹೇಳಿದೆ.
“AFC ಏಷ್ಯನ್ ಕಪ್ 2027 ಆತಿಥೇಯ ಆಯ್ಕೆ ಪ್ರಕ್ರಿಯೆಯಿಂದ ತಮ್ಮ ಬಿಡ್ ಅನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು AFC ಗೆ AIFF ಅಧಿಕೃತವಾಗಿ ಸೂಚಿಸಿದೆ. ಚೀನಾ ತನ್ನ ದೇಶದಲ್ಲಿನ ಕೊರೋನಾ ಪರಿಸ್ಥಿತಿಯಿಂದಾಗಿ ಪಂದ್ಯಾವಳಿಯನ್ನು ಪ್ರದರ್ಶಿಸಲು ಅಸಮರ್ಥತೆಯನ್ನು ವ್ಯಕ್ತಪಡಿಸಿದ ನಂತರ AFC ಏಷ್ಯನ್ ಕಪ್‌ನ 2023 ರ ಆವೃತ್ತಿಯು ಕತಾರ್‌ನಲ್ಲಿ ನಡೆಯಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ