ಏಮ್ಸ್‌ ಆಸ್ಪತ್ರೆಯ 250 ವೈದ್ಯರು, ಸಿಬ್ಬಂದಿಗೆ ಕೋವಿಡ್‌ ದೃಢ: ಒಪಿಡಿ ಸೇವೆ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಒಡಿಶಾದ ಭುವನೇಶ್ವರ್‌ ದಲ್ಲಿರುವ ಏಮ್ಸ್‌ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಸೇರಿ 250 ಮಂದಿಗೆ ಕೋರೋನಾ ದೃಢಪಟ್ಟಿದೆ.
ಆಸ್ಪತ್ರೆಯ ವೈದ್ಯರಿಗೆ ಸೋಂಕು ಪತ್ತೆಯಾಗಿರುವುದರಿಂದ ಹೊರ ರೋಗಿಗಳ ವಿಭಾಗ (ಒಪಿಡಿ)ಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಪ್ರೊ.ಡಾ.ಸಚ್ಚಿದಾನಂದ ಮೊಹಾಂತಿ ತಿಳಿಸಿದ್ದಾರೆ.
ಕೋವಿಡ್‌ ಪರಿಸ್ಥಿತಿಯಲ್ಲಿರುವುದರಿಂದ ಒಪಿಡಿಯನ್ನು ಸ್ಥಗಿತಗೊಳಿಸಲಾಗಿದ್ದು, ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಇತರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಈ ವೇಳೆ ಯಾವುದೇ ತುರ್ತು ವೈದ್ಯಕೀಯ ಸೇವೆ ಅಗತ್ಯತೆಗಳನ್ನು ಪೂರೈಸಲಾಗುತ್ತದೆ ಎಂದರು.
ರೇಡಿಯೋಥೆರಪಿ, ಶಸ್ತ್ರಚಿಕಿತ್ಸೆ, ಟೆಲಿ ಮೆಡಿಸಿನ್ ಕೋವಿಡ್‌ ಲಸಿಕೆ ಅಭಿಯಾನ ಸೇರಿದಂತೆ ಇತರೆ ತುರ್ತು ಆರೋಗ್ಯ ಸೇವೆ ಮುಂಚಿನಂತೆ ಮುಂದುವರಿಯುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!