ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ಮೈಸೂರು ಇಲ್ಲಿ ಖಾಲಿ ಇರುವ 16 ಪ್ರಾಧ್ಯಾಪಕ, ಸೀನಿಯರ್ ರಿಸರ್ಚ್ ಫೆಲೋ, ಪ್ರಾಜೆಕ್ಟ್ ಅಸೋಸಿಯೇಟ್, ರಿಸರ್ಚ್ ಆಫೀಸರ್ ಮತ್ತು ಇತರೆ ಹುದ್ದೆಗಳನ್ನು
ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಎಂ.ಎಸ್ಸಿ, ಎಂ.ಎಡ್, ಎಂಎಎಸ್‌ಎಲ್‌ಪಿ, ಎಂ.ಎಸ್.ಎಡ್ ವಿದ್ಯಾರ್ಹತೆ ಜೊತೆಗೆ ಹುದ್ದೆಗಳಿಗನುಸಾರ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 31,000/-ರಿಂದ 47,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.
ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಆಗಸ್ಟ್ 16,2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.