ಸುಡಾನ್​ನಲ್ಲಿ ಮತ್ತೆ ವೈಮಾನಿಕ ದಾಳಿ: 40ಕ್ಕೂ ಹೆಚ್ಚು ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುಡಾನ್​ನಲ್ಲಿ ಸೇನಾ ಪಡೆ ಹಾಗೂ ಅರಸೇನಾ ಪಡೆ ನಡುವಿನಕದನ ಹೆಚ್ಚುತ್ತಿದ್ದು ರಾಜಧಾನಿ ಖಾರ್ಟೂಮ್​ ಮೇಲೆ ನಡೆಸಲಾದ ವೈಮಾನಿಕ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟಟ್ಟಿರುವುದಾಗಿ ವರದಿಯಾಗಿದೆ.

ದಕ್ಷಿಣ ಖಾರ್ಟೂಮ್​ನ ಮಾರುಕಟ್ಟೆ ಪ್ರದೇಶದ ಮೇಲೆ ಬೆಳಗ್ಗೆ 7:15ರ ಸುಮಾರಿಗೆ ವೈಮಾನಿಕ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಸ್ಥಳೀಯ ತುರ್ತು ಕೊಠಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್​ 15ರಂದು ಸುಡಾನ್​ನಲ್ಲಿ ಸೇನಾ ಪಡೆದ ಹಾಗೂ ಅರೆಸೇನಾ ಪಡೆ ನಡುವೆ ಆರಂಭವಾಗಿದ್ದು, ಇನ್ನು ನಿಂತಿಲ್ಲ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!