ಹೊಸದಿಗಂತ ಡಿಜಿಟಲ್ ಡೆಸ್ಕ್:
ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಆತ್ಮ ನಿರ್ಭರವಾಗಿಸುವ ನಿಟ್ಟಿನಲ್ಲಿ ಇದೀಗ ಭಾರತೀಯ ವಾಯಸೇನೆಯು ಮಹತ್ವದ ಹೆಜ್ಜೆಯನ್ನಿಟ್ಟಿದ್ದು 1,400 ಕೋಟಿ ರುಪಾಯಿ ವೆಚ್ಚದಲ್ಲಿ ನೂತನವಾಗಿ ದೇಶೀಯವಾಗಿ ನಿರ್ಮಾಣಗೊಂಡಿರುವ ಕ್ಷಿಪಣಿಗಳನ್ನು ಖರೀದಿಸಲು ಮುಂದಾಗಿದೆ.
ದೇಶೀಯವಾಗಿ ನಿರ್ಮಾಣಗೊಂಡಿರುವ ಮುಂದಿನ ಪೀಳಿಗೆಯವಿಕಿರಣ ನಿರೋಧಕ ʼರುದ್ರಂʼ (NGARM) ಅನ್ನು ಖರೀದಿಸಲು ಚಿಂತಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿ ಪಡಿಸಿದ ರುದ್ರಂ ಎಂಬ ಕ್ಷಿಪಣಿಗಳನ್ನು ಖರೀದಿಸುವ ಪ್ರಸ್ತಾಪವು ಸಚಿವಾಲಯದಲ್ಲಿದ್ದು ಈ ಕುರಿತು ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ.
ಈ ರುದ್ರಂ ಕ್ಷಿಪಣಿಯ ಭಾರತೀಯ ವಾಯು ಪಡೆಯು ತನ್ನ ಸುಖೋಯ್-30 ಫೈಟರ್ ಏರ್ ಕ್ರಾಫ್ಟ್ ಬಳಸಿಕೊಂಡು ಈಗಾಗಲೇ ಪರೀಕ್ಷಿಸಿದೆ. ಇದು ಸಂಘರ್ಷದ ಸಮಯದಲ್ಲಿ ಶತ್ರು ರಾಡಾರ್ ಗಳನ್ನು ಪತ್ತೆ ಹಚ್ಚಲು ಸಹಾಯಕವಾಗಲಿದೆ. ಸುಖೋಯ್-30 ಮತ್ತು ಮಿರಾಜ್-2000 ನಂತಹ IAF ಫೈಟರ್‌ಗಳಿಂದ ಈ ಕ್ಷಿಪಣಿಯನ್ನು ಹಾರಿಸಬಹುದಾಗಿದ್ದು ಕಾರ್ಯಾಚರಣೆಯಲ್ಲಿ ಬಳಕೆಯಾಗದಿದ್ದರೂ ರೇಡಾರ್ ವ್ಯವಸ್ಥೆಯನ್ನು ಪತ್ತೆ ಹಚ್ಚಬಲ್ಲ ಸಾಮರ್ಥ್ಯ ಇದಕ್ಕಿದೆ.
ರುದ್ರಂ ಎಂಬುದು ಸಂಪೂರ್ಣವಾಗಿ ಸ್ಥಳೀಯವಾಗಿ ನಿರ್ಮಿತವಾದ ವಿಕಿರಣ ವಿರೋಧಿ ಕ್ಷಿಪಣಿಯಾಗಿದ್ದು ಮ್ಯಾಕ್-2 ಅಥವಾ ಶಬ್ದದ ವೇಗಕ್ಕಿಂತ ಎರಡು ಪಟ್ಟು ಹೆಚ್ಚು ವೇಗದಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ.