ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಹೊಸ ಲೋಗೋವನ್ನು ಅನಾವರಣ ಮಾಡಿದೆ.
ಇದೇ ವೇಳೆ ಏರ್ ಇಂಡಿಯಾ ವಿಮಾನದ ಬಣ್ಣದಲ್ಲೂ ಬದಲಾವಣೆ ಮಾಡಿದೆ. ವಿಶೇಷ ಅಂದರೆ ಏರ್ ಇಂಡಿಯಾ ಹೊಸ ಲೋಗೋಗೆ ದಿ ವಿಸ್ತಾ ಎಂದು ನಾಮಕರಣ ಮಾಡಲಾಗಿದೆ.
ಇದು ಗೋಲ್ಡನ್ ವಿಂಡೋ ಫ್ರೇಮ್‌ನಿಂದ ಪ್ರೇರಿತವಾಗಿದೆ. ಅಪರಿಮಿತ ಸಾಧ್ಯತೆಗಳು, ಪ್ರಗತಿಶೀಲತೆ ಮತ್ತು ಭವಿಷ್ಯದ ಬಗ್ಗೆ ಏರ್‌ಲೈನ್‌ನ ದಿಟ್ಟ, ಆತ್ಮವಿಶ್ವಾಸದ ದೃಷ್ಟಿಕೋನವನ್ನು ಸೂಚಿಸುತ್ತದೆ.
ಏರ್ ಇಂಡಿಯಾದಿಂದ ಬಳಸಿದ ಸಾಂಪ್ರದಾಯಿಕ ಭಾರತೀಯ ವಿಂಡೋ ಆಕಾರವನ್ನು ಗೋಲ್ಡನ್ ವಿಂಡೋ ಚೌಕಟ್ಟಿಗೆ ಮರು ರೂಪಿಸುತ್ತದೆ. ಇದು ಹೊಸ ಬ್ರ‍್ಯಾಂಡ್ ವಿನ್ಯಾಸ ವ್ಯವಸ್ಥೆಗೆ ಕೇಂದ್ರವಾಗುತ್ತದೆ ಎಂದು ಏರ್ ಇಂಡಿಯಾ ಹೇಳಿದೆ.
ಏರ್ ಇಂಡಿಯಾ ಪ್ರಯಾಣಿಕರು ಡಿಸೆಂಬರ್ ತಿಂಗಳಿನಿಂದ ಹೊಸ ಲೋಗೋ ಅನುಭವ ಪಡೆಯಲಿದ್ದಾರೆ. 2023ರ ಡಿಸೆಂಬರ್ ತಿಂಗಳಿನಿಂದ ಮೊದಲ ಏರ್ ಇಂಡಿಯಾ A350 ವಿಮಾನದಲ್ಲಿ ಹೊಸ ಲೋಗೋ ಜೊತೆ ಪ್ರಯಾಣ ಮಾಡಬಹುದು.