ಏರ್ ಇಂಡಿಯಾ ವಿಮಾನ ಸ್ಫೋಟ ಪ್ರಕರಣದ ಆರೋಪಿಯ ಗುಂಡಿಕ್ಕಿ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

1985ರ ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬರೋಬ್ಬರಿ 331 ಜನರ ಸಾವಿಗೆ ಕಾರಣವಾದ ರಿಪುದಮನ್ ಸಿಂಗ್ ಮಲಿಕ್‌‌, ಪಶ್ಚಿಮ ಕೆನಡಾದಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ.

ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ಪ್ರದೇಶದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾಗ ಈತನ ಮೇಲೆ ಗುಂಡು ಹಾರಿಸಲಾಗಿದೆ‌ ಎಂದು ಹೇಳಲಾಗಿದೆ.

1985 ಜೂನ್ 23 ರಂದು ಮಾಂಟ್ರಿಯಲ್‌ನಿಂದ ದೆಹಲಿಗೆ ಹೊರಟಿದ್ದ ಬೋಯಿಂಗ್ 747 ಕನಿಷ್ಕ, ಏರ್ ಇಂಡಿಯಾ ವಿಮಾನ 182ರ ಸ್ಫೋಟ ಪ್ರಕರಣದಲ್ಲಿ‌ ಮಲಿಕ್, ಹಾಗೂ ಇಂದರ್‌ಜೀತ್ ಸಿಂಗ್ ರಿಯಾತ್, ಅಜೈಬ್ ಸಿಂಗ್ ಬಗ್ರಿ ಮೂವರು ಪ್ರಮುಖ ಆರೋಪಿಗಳಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!