ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬೆನ್ನೆಲ್ಲೇ ಎಚ್ಚೆತ್ತ ಏರ್ ಇಂಡಿಯಾ ಇಂದು ಬೆಳಗ್ಗೆ ಭಾರತೀಯರನ್ನು ಹೊತ್ತು ದೆಹಲಿಗೆ ಸುರಕ್ಷಿತವಾಗಿ ಬಂದಿಳಿದಿದೆ.
ಉಕ್ರೇನ್ ನಲ್ಲಿರುವ ಭಾರತೀಯರಿಗೆ ಭಾರತ ಸರ್ಕಾರ ಕೂಡಲೇ ಉಕ್ರೇನ್ ತೊರೆಯುವಂತೆ ಮನವಿ ಮಾಡಿತ್ತು. ಇದಕ್ಕೆ ಸೂಕ್ತವಾದ ವಿಮಾನ ವ್ಯವಸ್ಥೆಯೂ ಮಾಡಲಾಗಿತ್ತು.
ಅದರಂತೆ ಎರಡು ದಿನಗಳ ಹಿಂದೆ 241 ಭಾರತೀಯರನ್ನು ಹೊತ್ತು ಏರ್ ಇಂಡಿಯಾ ಭಾರತಕ್ಕೆ ಬಂದಿತ್ತು. ಇದೀಗ ಉಕ್ರೇನ್ ನಿಂದ 2ನೇ ವಿಶೇಷ ವಿಮಾನ ಕೂಡ ಮತ್ತಷ್ಟು ಭಾರತೀಯರನ್ನು ಹೊತ್ತು ತಾಯ್ನಾಡಿಗೆ ವಾಪಾಸ್ ಆಗಿದೆ.
ಉಕ್ರೇನ್ ನ ಕೀವ್ ನಲ್ಲಿದ್ದ ಏರ್ ಇಂಡಿಯಾದ AI1947 ವಿಮಾನ ವಾಪಾಸ್ ಭಾರತಕ್ಕೆ ಬರುತ್ತಿದೆ.
ರಷ್ಯಾ ತನ್ನ ಮೇಲೆ ಯುದ್ಧ ಮಾಡುವುದಾಗಿ ಘೊಷಿಸಿದ ಬೆನ್ನಲ್ಲೆ ಉಕ್ರೇನ್ ವಿಮಾನಯಾನಕ್ಕೆ ನಿರ್ಬಂಧ ಹೇರಿದೆ. ಅಲ್ಲದೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.