Saturday, April 1, 2023

Latest Posts

ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್ ನಲ್ಲಿ ತುರ್ತು ಭೂಸ್ಪರ್ಶ!

 ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಏರ್ ಇಂಡಿಯಾ ವಿಮಾನ ಸ್ವೀಡನ್ ನ ಸ್ಟಾಕ್ಹೋಮ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಅಮೆರಿಕದ ನೆವಾರ್ಕ್ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಬರುತ್ತಿದ್ದ ಸುಮಾರು 290ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನ ಸ್ವೀಡನ್ ನ ಸ್ಟಾಕ್ಹೋಮ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಬೋಯಿಂಗ್ 777-300ER ವಿಮಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ AI106 ವಿಮಾನವು ಇಂಜಿನ್ ಒಂದರಲ್ಲಿ ತೈಲ ಸೋರಿಕೆಯಾದ ಕಾರಣದಿಂದ ಆ ವಿಮಾನವನ್ನು ಡೈವರ್ಟ್ ಮಾಡಿ ಸ್ವೀಡನ್ನ ಸ್ಟಾಕ್ಹೋಮ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಾಗಿದೆ. ಅದೃಷ್ಟವಶಾತ್, ಈ ವಿಮಾನದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಪರಿಶೀಲನೆಯ ಸಮಯದಲ್ಲಿ, ಎಂಜಿನ್ ಎರಡರ ಡ್ರೈನ್ ಮಾಸ್ಟ್ನಿಂದ ತೈಲ ಹೊರಬರುತ್ತಿರುವುದು ಕಂಡುಬಂದಿದೆ, ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!