ಕೂದಲು ಉದುರುವವರು ತಲೆ ಬೋಳಿಸಿ: ಏರ್ ಇಂಡಿಯಾ ಮ್ಯಾನೇಜ್‌ಮೆಂಟ್ ಸಿಬ್ಬಂದಿಗೆ ಹೊಸ ನಿಯಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡ ನಂತರ, ಟಾಟಾ ಗ್ರೂಪ್ ಉಳಿದ ಕಂಪನಿಗಳಂತೆ ಲಾಭದಾಯಕತೆಯತ್ತ ಸಾಗಲು  ಪ್ರಾರಂಭಿಸಿದೆ. ಎಲ್ಲಾ ವಿಭಾಗಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ ವಿಶೇಷವಾಗಿ ಗಗನಸಖಿ, ಸಿಬ್ಬಂದಿ ವರ್ತನೆ, ಉಡುಗೆ ತೊಡುಗೆ ಇತ್ಯಾದಿಗಳ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಮ್ಯಾನೇಜ್‌ಮೆಂಟ್ ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಏರ್ ಇಂಡಿಯಾ ಪುರುಷ ಸಿಬ್ಬಂದಿ ಹೇರ್ ಜೆಲ್ ಬಳಸಬೇಕು. ತಲೆ ಕೂದಲು ಜಾಸ್ತಿ ಉದುರುವವರು ಸಂಪೂರ್ಣವಾಗಿ ಬೋಳಿಸಿಕೊಂಡು ಕೆಲಸಕ್ಕೆ ಬರಬೇಕು ಹಾಗೂ ಪ್ರತಿದಿನ ಶೇವ್ ಮಾಡುವುದು ತಪ್ಪಲ್ಲ ಎಂದು ಆಡಳಿತ ಮಂಡಳಿ ಮಾರ್ಗಸೂಚಿಯಲ್ಲಿ ತಿಳಿಸಿದೆ. ಅದೇ ರೀತಿ ಬಿಳಿ ಕೂದಲಿರುವವರು ನೈಸರ್ಗಿಕವಾಗಿ ಕಾಣುವಂತೆ ಕೂದಲಿಗೆ ಬಣ್ಣ ಹಚ್ಚಬೇಕು.

ಮಹಿಳಾ ಉದ್ಯೋಗಿಗಳಿಗೆ ವಿಶೇಷ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಮಹಿಳಾ ಸಿಬ್ಬಂದಿಯ ಕೂದಲು ಬೂದು ಬಣ್ಣದಲ್ಲಿದ್ದರೆ, ಅವರು ನೈಸರ್ಗಿಕ ಛಾಯೆಗಳನ್ನು ಅಥವಾ ಕಂಪನಿಯ ಕೂದಲಿನ ಬಣ್ಣದ ಛಾಯೆಯ ಕಾರ್ಡ್ನಲ್ಲಿರುವ ಬಣ್ಣಗಳನ್ನು ಧರಿಸಬೇಕು. ಮುತ್ತಿನ ಕಿವಿಯೋಲೆಗಳನ್ನು ಧರಿಸಬಾರದು. ವಿನ್ಯಾಸವಿಲ್ಲದ ಚಿನ್ನ ಮತ್ತು ವಜ್ರದ ಆಕಾರದ ಕಿವಿಯೋಲೆಗಳನ್ನು ಮಾತ್ರ ಧರಿಸಬೇಕು. ಉಂಗುರಗಳ ಅಗಲ 1cm ಗಿಂತ ಹೆಚ್ಚಿರಬಾರದು. ಕೈ, ಕುತ್ತಿಗೆಗಳು, ಕಾಲು ಮೇಲೆ ಕಪ್ಪು ಅಥವಾ ಧಾರ್ಮಿಕ ದಾರಗಳನ್ನು ಕಟ್ಟುವುದ ಸಹ ನಿಷೇಧಿಸಲಾಗಿದೆ. ಗಗನಸಖಿಯರು ತಮ್ಮ ಕೈಯಲ್ಲಿ ಡಿಸೈನರ್ ಬಳೆಗಳನ್ನು ಧರಿಸಬಾರದು. ಲಿಪ್ ಸ್ಟಿಕ್, ನೇಲ್ ಪೇಂಟ್ ಇತ್ಯಾದಿಗಳ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಏರ್ ಇಂಡಿಯಾ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!