200 ಹೊಸ ವಿಮಾನ ಖರೀದಿಸಲು ಏರ್‌ ಇಂಡಿಯಾ ಚಿಂತನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟಾಟಾ ಗ್ರುಪ್‌ ಒಡೆತನದ ಏರ್‌ ಇಂಡಿಯಾ ಕಂಪನಿಯು 200 ಹೊಸವಿಮಾನಗಳನ್ನು ಖರೀದಿಸಲು ಚಿಂತಿಸುತ್ತಿದೆ. ಹಾಗೂ ಪ್ರಯಾಣವನ್ನು ಹೆಚ್ಚು ಸುಗಮಗೊಳಿಸುವ ದೃಷ್ಟಿಯಿಂದ ಕಿರಿದಾದ ದೇಹದ (ನ್ಯಾರೋ ಬಾಡಿ) ವಿಮಾನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಯೋಚಿಸುತ್ತಿದೆ ಎನ್ನಲಾಗಿದೆ.

ಈ ಕುರಿತು ವಿಮಾನ ತಯಾರಕ ಕಂಪನಿಗಳಾದ ಏರ್‌ಬಸ್‌ ಮತ್ತು ಬೋಯಿಂಗ್‌ನೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಏರ್‌ ಇಂಡಿಯಾ ಹೇಳಿದೆ. ಅಲ್ಲದೇ ಏರ್‌ಬಸ್‌ನ A350ಯಂತಹ ವಿಶಾಲ ದೇಹವುಳ್ಳ ವಿಮಾನದ ಕುರಿತಾಗಿಯೂ ಚಿಂತಿಸಲಾಗುತ್ತಿದೆ. ಇದು ದೊಡ್ಡ ಇಂಧನ ಟ್ಯಾಂಕ್‌ ಹೊಂದಿದ್ದು ಹೆಚ್ಚು ದೂರ ಕ್ರಮಿಸಲು ಸಹಾಯಕ ವಾಗಿದೆ.

2011ರ ನಂತರ ಏರ್‌ ಇಂಡಿಯಾ ಇದುವರೆಗೂ ಒಂದೇ ಒಂದು ವಿಮಾನವನ್ನು ಖರೀದಿಸಿಲ್ಲ. ಪ್ರಸ್ತುತ 200 ಹೊಸ ಏರೋಪ್ಲೇನ್‌ಗಳನ್ನು ಖರೀದಿಸಲು ಚಿಂತಿಸಲಾಗುತ್ತಿದ್ದು ಏರ್‌ ಇಂಡಿಯಾ ಮುಂದಿನ ದಿನಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಕೊಳ್ಳುವ ಭರವಸೆ ಮೂಡುವಂತೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!