ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟದ ಸೂಚ್ಯಂಕ ದಿನೇದಿನೇ ಆತಂಕಕಾರಿ ಹಂತ ತಲುಪುತ್ತಿದೆ. ಬೆಂಗಳೂರಿನೊಂದಿಗೆ ಮಂಗಳೂರು, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏರ್ ಕ್ವಾಲಿಟಿ 200ರ ಗಡಿಗೆ ಸಮೀಪಿಸಿರುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ಗಂಟೆ ಹೊಡೆದಂತಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ ಬಳ್ಳಾರಿಯಲ್ಲಿ AQI 204ಕ್ಕೆ ಏರಿಕೆಯಾಗಿ ‘ಗಂಭೀರ’ ವರ್ಗಕ್ಕೆ ಸೇರಿದೆ. ಶಿವಮೊಗ್ಗ ಮತ್ತು ಬೆಂಗಳೂರು ಎರಡೂ ನಗರಗಳಲ್ಲಿ ಗಾಳಿಯ ಗುಣಮಟ್ಟ 180ಕ್ಕೂ ಮೇಲಾಗಿದ್ದು, WHO ಮಾರ್ಗಸೂಚಿಗಳ ಪ್ರಕಾರ ಇದು ಆರೋಗ್ಯಕ್ಕೆ ಹಾನಿಕರ ಮಟ್ಟವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ:
ಇತರ ನಗರಗಳ ಸ್ಥಿತಿಯೂ ಸಮಾಧಾನಕರವಲ್ಲ. ಮಂಗಳೂರು 174, ಮೈಸೂರು 175, ಬೆಳಗಾವಿ 156, ಕಲಬುರ್ಗಿ 170, ಹುಬ್ಬಳ್ಳಿ 166 ಮತ್ತು ಉಡುಪಿ 176 AQI ದಾಖಲಿಸಿವೆ. ತಜ್ಞರ ಸಲಹೆಯಂತೆ ಮಕ್ಕಳು, ವೃದ್ಧರು ಹಾಗೂ ಉಸಿರಾಟ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.



