May 12, 2026
Tuesday, May 12, 2026
spot_img

ರಾಜ್ಯಕ್ಕೆ ವಾಯು ಮಾಲಿನ್ಯದ ಪೆಟ್ಟು: ನಿಮ್ಮ ನಗರದ ಗಾಳಿ ಉಸಿರಾಡಲು ಯೋಗ್ಯವಾಗಿದೆಯೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಆತಂಕದ ನೆರಳು ಬೀರಿದೆ. ಕೆಲ ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಬೆಂಗಳೂರಿನ ವಾಯು ಮಾಲಿನ್ಯ ಇಂದು ‘ಕಳಪೆ’ ಮಟ್ಟಕ್ಕೆ ತಲುಪಿದೆ.

ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಸಿಲಿಕಾನ್ ಸಿಟಿಯ AQI ಇಂದು 147 ದಾಖಲಾಗಿದೆ. ಗಣಿನಾಡು ಬಳ್ಳಾರಿಯಲ್ಲಿ 149 ಹಾಗೂ ಶಿವಮೊಗ್ಗದಲ್ಲಿ 143 ರಷ್ಟು ಮಾಲಿನ್ಯ ದಾಖಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ನಿನ್ನೆ ಚೇತರಿಕೆ ಕಂಡಿದ್ದ ಕರಾವಳಿ ನಗರಿಯ ಗಾಳಿಯ ಗುಣಮಟ್ಟ ಇಂದು ಮತ್ತೆ ಕುಸಿತ ಕಂಡಿದೆ. ಮೈಸೂರು ಮತ್ತು ಬೆಳಗಾವಿ ಈ ಎರಡೂ ನಗರಗಳಲ್ಲಿ AQI 150ರ ಗಡಿ ದಾಟುವ ಮೂಲಕ ಆತಂಕ ಮೂಡಿಸಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ, ಈ ನಗರಗಳಲ್ಲಿನ ಗಾಳಿಯು ಉಸಿರಾಟಕ್ಕೆ ಯೋಗ್ಯವಾಗಿಲ್ಲ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಿರಿಯ ನಾಗರಿಕರು ಮತ್ತು ಮಕ್ಕಳು ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !