ಮಾಲಿನ್ಯ: ಎಲ್ಲಿಗೆ ಬಂದು ನಿಂತಿದೆ ನೋಡಿ ದೆಹಲಿ ಸ್ಥಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) ಸ್ವಲ್ಪ ಸುಧಾರಣೆ ಕಂಡುಬಂದರೂ, ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಸತತ ಮೂರನೇ ದಿನ ಶನಿವಾರದಂದು ತೀವ್ರಗತಿಯಲ್ಲಿ ಸಾಗಿದೆ. ಇಂದು ಬೆಳಗ್ಗೆ AQI 431 ರಷ್ಟು ದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಇಂದಿಗೆ ಸ್ವಲ್ಪ ಇಳಿಮುಖವಾಗಿದೆ. ನಿನ್ನೆಯ ಸ್ಥಿತಿ AQI 472 ರಷ್ಟು ದಾಖಲಾಗಿತ್ತು.

ಗಾಳಿಯ ಗುಣಮಟ್ಟವು ಹದೆಗಟ್ಟಿರುವುದರಿಂದ ದೆಹಲಿಯು ಹೊಗೆಯಿಂದ ಆವೃತವಾಗಿದೆ ಸಿಗ್ನೇಚರ್ ಸೇತುವೆಯ ಸುತ್ತಲಿನ ಪ್ರದೇಶಗಳು ಹೊಗೆಯಿಂದ ಕೂಡಿದ್ದು, ರಸ್ತೆ ಮೇಲಿನ ವಾಹನಗಳು ಕೂಡಾ ಕಾಣದಷ್ಟು ದಟ್ಟವಾಗಿದೆ.

ದೆಹಲಿ, ಗುರುಗ್ರಾಮ್, ನೋಯ್ಡಾ ಮತ್ತು ಫರಿದಾಬಾದ್‌ನಲ್ಲಿ ಗಾಳಿಯ ಗುಣಮಟ್ಟದಲ್ಲಿ ಭಾರಿ ಕುಸಿತ ಕಂಡುಬಂದಿದೆ. ದೆಹಲಿ ಎನ್‌ಸಿಆರ್‌ನ ಜನರು ಮಾಲಿನ್ಯದಿಂದ ಹತ್ತು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಣ್ಣಿನ ಉರಿ, ಗಂಟಲು ನೋವು ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಸಿಬ್ಬಂದಿ ನೀರಿನ ಟ್ಯಾಂಕರ್‌ಗಳು ಮತ್ತು ಸ್ಮಾಗ್ ಗನ್‌ಗಳಿಂದ ನೀರನ್ನು ಸಿಂಪಡಿಸಿ ರಸ್ತೆ ಮತ್ತು ಮರಗಳ ಧೂಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.

ಪ್ರಸ್ತುತ, ದೆಹಲಿಯಾದ್ಯಂತ ವಾಯು ಗುಣಮಟ್ಟ ಸೂಚ್ಯಂಕ (AQI) 431 ಪಾಯಿಂಟ್‌ಗಳು, ನೋಯ್ಡಾದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 529 ಅಂಕಗಳು, ಅದೇ ರೀತಿ ದೆಹಲಿ ವಿಶ್ವವಿದ್ಯಾಲಯ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 475 ಅಂಕಗಳು ಮತ್ತು  ಗುರ್ಗಾಂವ್‌ನಲ್ಲಿ(AQI) 478 ಅಂಕಗಳು.

ದೆಹಲಿ ಜನರನ್ನು ಮಾಲಿನ್ಯದಿಂದ ದೂರವಿಡಲು ದೆಹಲಿ ಸರಕಾರ ಕ್ರಮ ಕೈಗೊಂಡಿದೆ. ಅಪಾಯಕಾರಿ ಮಟ್ಟದ ಮಾಲಿನ್ಯದ ಹಿನ್ನೆಲೆಯಲ್ಲಿ ಅಗತ್ಯಬಿದ್ದರೆ ಮಾತ್ರ ಹೊರಗೆ ಬರುವಂತೆ ಸರ್ಕಾರ ಜನರಿಗೆ ಸಲಹೆ ನೀಡಿದೆ. ದೆಹಲಿಯಲ್ಲಿ ಈಗಾಗಲೇ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ. ಸರ್ಕಾರವು ಮುಂದಿನ ಆದೇಶದವರೆಗೆ ಶಾಲೆಗಳಿಗೆ ರಜೆ ಘೋಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!