ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮುಂದುವರಿದಿದೆ. ಇಂದು (ಗುರುವಾರ) ಮುಂಜಾನೆ AQI 452ರ ಗಡಿ ದಾಟಿದ್ದು ದಟ್ಟಮಂಜಿನಂತಹ ಹೊಗೆ ಆಚರಿಸಿಕೊಂಡಿತ್ತು. ಫ್ಲೈಟ್‌ರಾಡಾರ್ ಪ್ರಕಾರ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಚರತೆ ಕಡಿಮೆಯಾಗಿದೆ, ಇದರಿಂದಾಗಿ 300 ಅಧಿಕ ವಿಮಾನಗಳು ವಿಳಂಬವಾಗಿವೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ರಾಜಧಾನಿ ಪ್ರದೇಶದ ಹಲವಾರು ಪ್ರದೇಶಗಳಲ್ಲಿ AQI 450 ಕ್ಕಿಂತ ಹೆಚ್ಚು ದಾಖಲಾಗಿದೆ. ಆನಂದ್ ವಿಹಾರ್, ಅಶೋಕ್ ವಿಹಾರ್, ಬವಾನಾ, ದ್ವಾರಕಾ, ಜಹಾಂಗೀರ್ಪುರಿ, ಮುಂಡ್ಕಾ, ನಜಾಫ್ಗಢ್, ಲಜಪತ್ ನಗರ, ಪಟ್ಪರ್ಗಂಜ್, ಪಂಜಾಬಿ ಬಾಗ್, ಆರ್‌ಕೆ ಪುರಂ, ರೋಹಿಣಿ, ವಿವೇಕ್ ವಿಹಾರ್, ಮತ್ತು ವಜೀರ್‌ಪುರ ದೆಹಲಿಯ ಹಲವಾರು ಪ್ರದೇಶಗಳಲ್ಲಿ ಸೇರಿವೆ.