Monday, December 4, 2023

Latest Posts

ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಉಲ್ಬಣ: ದೆಹಲಿಯಲ್ಲಿ ಟ್ರಕ್‌ ಸಂಚಾರಕ್ಕೆ ಬ್ರೇಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ (Air Pollution) ವಿಪರೀತವಾಗಿ ಹೆಚ್ಚಿದ್ದು, ಜನರು ಉಸಿರಾಡಲು ಪರದಾಡುವಂತಾಗಿದೆ.

ಗಾಳಿಯ ಗುಣಮಟ್ಟವು ಸತತ ನಾಲ್ಕನೇ ದಿನವೂ ‘ತೀವ್ರ ಕಲುಷಿತ’ ವಿಭಾಗದಲ್ಲಿರುವುದರಿಂದ ಕೇಂದ್ರವು ಗ್ರೇಡೆಡ್ ರೆಸ್ಪಾನ್ಸ್ ಆಯಕ್ಷನ್ ಪ್ಲಾನ್ (Graded Response Action Plan-GRAP)ನ ನಾಲ್ಕನೇ ಹಂತದ ಕ್ರಮಗಳನ್ನು ಜಾರಿಗೆ ತಂದಿದೆ.
ಸರಕುಗಳನ್ನು ಸಾಗಿಸುವ / ಅಗತ್ಯ ಸೇವೆಗಳನ್ನು ಒದಗಿಸುವ ವಾಹನಗಳು ಮತ್ತು ಎಲ್ಲ ಎಲ್‌ಎನ್‌ಜಿ / ಸಿಎನ್‌ಜಿ / ಎಲೆಕ್ಟ್ರಿಕ್ ಟ್ರಕ್‌ಗಳನ್ನು ಹೊರತುಪಡಿಸಿ ಉಳಿದ ಟ್ರಕ್‌ಗಳಿಗೆ ದೆಹಲಿ ಪ್ರವೇಶವನ್ನು ನಿಷೇಧಿಸಲಾಗಿದೆ.

ಗ್ರೇಡೆಡ್ ರೆಸ್ಪಾನ್ಸ್ ಆಯಕ್ಷನ್ ಪ್ಲಾನ್ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರದ ವಾಯು ಗುಣಮಟ್ಟ ನಿರ್ವಹಣಾ ಆಯೋಗ (Centre’s Commission for Air Quality Management-CAQM) ಸಿದ್ಧಪಡಿಸಿದ ಕ್ರಮಗಳ ಗುಂಪು. ವಾಯು ಗುಣಮಟ್ಟ ಸೂಚ್ಯಂಕ (Air Quality Index-AQI) 450ಕ್ಕಿಂತ ಹೆಚ್ಚಿದ್ದಾಗ ಅಥವಾ ‘ತೀವ್ರ ಪ್ಲಸ್’ ವಿಭಾಗದಲ್ಲಿದ್ದಾಗ ಜಿಆರ್‌ಎಪಿಯ IVನೇ ಹಂತವನ್ನು ಜಾರಿಗೊಳಿಸಲಾಗುತ್ತದೆ.

ಅದ್ರ ಭಾಗವಾಗಿ ಅಗತ್ಯ ಸರಕುಗಳನ್ನು ಸಾಗಿಸುವ ಟ್ರಕ್‌, ಎಲೆಕ್ಟ್ರಿಕ್ ವಾಹನಗಳು, ಸಿಎನ್‌ಜಿ, ಬಿಎಸ್-6 ಡೀಸೆಲ್ ವಾಹನಗಳು, ದೆಹಲಿಯ ಹೊರಗೆ ನೋಂದಾಯಿಸಲಾದ ಲಘು ವಾಣಿಜ್ಯ ವಾಹನಗಳು, ಅಗತ್ಯ ಸರಕುಗಳನ್ನು ಸಾಗಿಸುವ / ಅಗತ್ಯ ಸೇವೆಗಳನ್ನು ಒದಗಿಸುವ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳಿಗೆ ದೆಹಲಿ ಪ್ರವೇಶ ನಿಷೇಧಿಸಲಾಗಿದೆ.

ಅದೇ ರೀತಿ ಹೆದ್ದಾರಿಗಳು, ರಸ್ತೆಗಳು, ಮೇಲ್ಸೇತುವೆಗಳು, ವಿದ್ಯುತ್ ಪ್ರಸರಣ, ಪೈಪ್‌ಲೈನ್‌ಗಳು ಮುಂತಾದ ಸಾರ್ವಜನಿಕ ಯೋಜನೆಗಳು ಸೇರಿದಂತೆ ದೆಹಲಿಯಲ್ಲಿ ಎಲ್ಲಾ ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕ, ಪುರಸಭೆ ಮತ್ತು ಖಾಸಗಿ ಕಚೇರಿಗಳು 50% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಮತ್ತು ಉಳಿದವರು ಮನೆಯಿಂದ ಕೆಲಸ ಮಾಡುವಂತೆ ದೆಹಲಿ ಸರ್ಕಾರ ಸೂಚಿಸಿದೆ. ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಕೇಂದ್ರ ಸರ್ಕಾರ ನಿರ್ದೇಶಿಸುವ ಸಾಧ್ಯತೆ ಇದೆ. ಈಗಾಗಲೇ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!